ವೆಂಟಿಲೇಟರ್ ಕೊರತೆ, ಬೆಡ್ ಸಿಗ್ತಿಲ್ಲ, ಸ್ಮಶಾನದಲ್ಲಿ ಕ್ಯೂ; ಎಲ್ಲಿಗೆ ಬಂತು ಕೊರೊನಾ ಆರ್ಭಟ

ಕೊರೊನಾ ಸೋಂಕು ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ನೈಟ್‌ ಕರ್ಫ್ಯೂ, ಕಠಿಣ ಕ್ರಮ ಯಾವುದಕ್ಕೂ ಸೋಂಕು ಬಗ್ಗುತ್ತಿಲ್ಲ. ಸಾವು- ನೋವಿನ ಪ್ರಮಾಣ ಕಣ್ಣೀರು ತರಿಸುತ್ತಿದೆ. 

First Published Apr 14, 2021, 3:29 PM IST | Last Updated Apr 14, 2021, 3:37 PM IST

ಬೆಂಗಳೂರು (ಏ. 14): ಕೊರೊನಾ ಸೋಂಕು ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ನೈಟ್‌ ಕರ್ಫ್ಯೂ, ಕಠಿಣ ಕ್ರಮ ಯಾವುದಕ್ಕೂ ಸೋಂಕು ಬಗ್ಗುತ್ತಿಲ್ಲ. ಸಾವು- ನೋವಿನ ಪ್ರಮಾಣ ಕಣ್ಣೀರು ತರಿಸುತ್ತಿದೆ. ಮಗುವನ್ನು ಕಳೆದುಕೊಂಡ ತಾಯಿಯ ಆಕ್ರಂದನ, ಚಿಕಿತ್ಸೆ ಸಿಗದೇ ಸೋಂಕಿತರ ನರಳಾಟ ಮನಕಲಕುತ್ತಿದೆ.

ವೈರಸ್ ದಾಳಿಗೆ ನಲುಗಿದ ಸಿಲಿಕಾನ್ ಸಿಟಿ: ಬೆಂಗ್ಳೂರಿಗೆ ಮತ್ತಷ್ಟು ಟಫ್‌ರೂಲ್ಸ್..?

ವೆಂಟಿಲೇಟರ್ ಕೊರತೆ, ಆಂಬುಲೆನ್ಸ್ ಇಲ್ಲ ಅನ್ನೋದು ಕಾಮನ್ ಆಗೋಗಿದೆ. ಇನ್ನು ಛತ್ತೀಸ್‌ಗಢ್, ಮಹಾರಾಷ್ಟ್ರದಲ್ಲಂತೂ ಆಸ್ಪತ್ರೆ ಜೊತೆ ಸ್ಮಶಾನಗಳು ಹೌಸ್‌ಫುಲ್ ಆಗಿವೆ. ಅಲ್ಲಿನ ದೃಶ್ಯಗಳನ್ನು ನೋಡಿದ್ರೆ ಪರಿಸ್ಥಿತಿಯ ಕರಾಳತೆ ಅರ್ಥ ಆಗುತ್ತದೆ. ಎಲ್ಲೆಲ್ಲಿ ಹೇಗ್ಹೇಗಿದೆ ಸ್ಥಿತಿ..? ನೋಡಿ.