ಭಾರತ್ ಜೋಡೋ ಮಾಡಿದ ಕಾಂಗ್ರೆಸ್‌ನಿಂದಲೇ ಇದೀಗ ಉತ್ತರ-ದಕ್ಷಿಣ ವಿಭಜನೆ ಕಿಡಿ!
ದೇಶದಲ್ಲಿ ಕಿಚ್ಚು ಹಚ್ಚಿದ ಕಾಂಗ್ರೆಸ್‌ನ ಉತ್ತರ-ದಕ್ಷಿಣ ವಿವಾದ, ಗೋ ಮೂತ್ರ ರಾಜ್ಯದಲ್ಲಿ ಮಾತ್ರ ಬಿಜೆಪಿಗೆ ಗೆಲುವು, ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಸ್ಥಾನವಿಲ್ಲ ಎಂದ ಇಂಡಿ ಒಕ್ಕೂಟದ ಮಿತ್ರ ಪಕ್ಷ ಡಿಎಂಕೆ ನಾಯಕ,ತೆಲಂಗಾಣ ನೂತನ ಮುಖ್ಯಮಂತ್ರಿಯಾಗಿ ರೇವಂತ್ ರೆಡ್ಡಿ ಡಿ.7ಕ್ಕೆ ಪ್ರಮಾಣವಚನ ಸೇರಿದಂತೆ ಇಂದಿನ ಇಡೀ ದಿನದ ಪ್ರಮುಖ ಸುದ್ದಿಯ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.
ದೇಶವನ್ನೂ ಒಗ್ಗೂಡಿಸಲು ಭಾರತ್ ಜೋಡೋ ಎಂದು ಪಾದಯಾತ್ರೆ ಮಾಡಿದ ಕಾಂಗ್ರೆಸ್ ಇದೀಗ ಉತ್ತರ ಭಾರತ ಹಾಗೂ ದಕ್ಷಿಣ ಭಾರತ ಅನ್ನೋ ವಿಭಜನೆ ಕಿಡಿ ಹೊತ್ತಿಸಿದೆ. ಪಂಚ ರಾಜ್ಯ ಚುನಾವಣಾ ಫಲಿತಾಂಶ ಬಳಿಕ ಕಾಂಗ್ರೆಸ್ ಹಿರಿಯ ನಾಯಕನ ಪಿ ಚಿದಂಬರಂ ಪುತ್ರ ಕಾರ್ತಿ ಚಿದಂಬರ ಮಾಡಿರುವ ಟ್ವೀಟ್ ಭಾರಿ ವಿವಾದ ಹಾಗೂ ಆಕ್ರೋಶಕ್ಕೆ ಕಾರಣವಾಗಿದೆ. ತೆಲಂಗಾಣ ರಾಜ್ಯದಲ್ಲಿ ಕಾಂಗ್ರೆಸ್ ಗೆಲುವು ದಾಖಲಿಸುವ ಮೂಲಕ ದಕ್ಷಿಣ ಸಂಪೂರ್ಣ ಬಿಜೆಪಿ ಮುಕ್ತಗೊಂಡಿದೆ ಅನ್ನೋ ಟ್ವೀಟ್ ಹಾಗೂ ಇಂಡಿ ಒಕ್ಕೂಡ ಮಿತ್ರ ಪಕ್ಷ ನಾಯಕರ ಹೇಳಿಕೆಯಿಂದ ಇದೀಗ ಉತ್ತರ ಭಾರತ ಹಾಗೂ ದಕ್ಷಿಣ ಭಾರತ ಕಿಡಿ ಹೊತ್ತಿಕೊಂಡಿದೆ. ಇತ್ತ ಡಿಎಂಕೆ ನಾಯಕ ಹಿಂದಿ ರಾಜ್ಯಗಳು, ಅಂದರೆ ಗೋ ಮೂತ್ರ ರಾಜ್ಯಗಳಲ್ಲಿ ಮಾತ್ರ ಬಿಜೆಪಿ ಗೆಲುವು ಸಾಧಿಸುತ್ತೆ. ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಏನೂ ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ.