
ಪಾಕಿಸ್ತಾನಕ್ಕೆ ಮೊದಲೇ ಮಾಹಿತಿ ನೀಡಿತ್ತಾ ಭಾರತ? ರಾಹುಲ್ ಗಾಂದಿ ಪ್ರಶ್ನೆಯಿಂದ ಚರ್ಚೆ ಶುರು
ಆಪರೇಶನ್ ಸಿಂದೂರ್ ಮಾಹಿತಿಯನ್ನು ಭಾರತ-ಪಾಕಿಸ್ತಾನಕ್ಕೆ ಮೊದಲೇ ನೀಡಿದ್ದು ತಪ್ಪು, ಇದರಿಂದ ನಮ್ಮ ಎಷ್ಟು ವಿಮಾನ ಪತನಗೊಂಡಿದೆ ಎಂದು ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ. ರಾಹುಲ್ ಗಾಂಧಿ ಪ್ರಶ್ನೆಯನ್ನು ಕಾಂಗ್ರೆಸ್ ಸಮರ್ಥಿಸಿಕೊಂಡು ಭಾರಿ ಚರ್ಚೆ ಹುಟ್ಟುಹಾಕಿದೆ. ಇಂದಿನ ಪ್ರಮುಖ ಸುದ್ದಿಯ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.
ಆಪರೇಶನ್ ಸಿಂದೂರ್ ಕುರಿತು ವಿಪಕ್ಷಗಳು ಹಲವು ಪ್ರಶ್ನೆಗಳನ್ನು ಕೇಂದ್ರ ಸರ್ಕಾರಕ್ಕೆ ಕೇಳಿದೆ. ಈ ಪೈಕಿ ರಾಹುಲ್ ಗಾಂಧಿ ಕೆಲ ಪ್ರಶ್ನೆಗಳನ್ನು ಎತ್ತಿದ್ದಾರೆ. ಆಪರೇಶನ್ ಸಿಂದೂರ್ ದಾಳಿ ಮಾಡುವ ಮೊದಲು ಈ ಮಾಹಿತಿಯನ್ನು ಪಾಕಿಸ್ತಾನಕ್ಕೆ ಭಾರತ ನೀಡಿತ್ತು. ಇದು ಅಪರಾಧ ಕೆಲಸ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಈ ರೀತಿ ಮೊದಲೇ ಮಾಹಿತಿ ನೀಡಿದ ಕಾರಣ ಭಾರತದ ಎಷ್ಟು ಯುದ್ಧ ವಿಮಾನ ಪತನಗೊಂಡಿದೆ ಎಂದು ಪ್ರಶ್ನಿಸಿದ್ದಾರೆ. ಏನಿದು ಮಾಹಿತಿ ಕೊಟ್ಟ ವಿವಾದ?