Asianet Suvarna News Asianet Suvarna News

News Hour ರಾಮಮಂದಿರ ಆಮಂತ್ರಣ ತಿರಸ್ಕಾರಕ್ಕೆ ಕಾಂಗ್ರೆಸ್‌ನಲ್ಲೇ ಭಿನ್ನರಾಗ!


ರಾಮಮಂದಿರ ಉದ್ಘಾಟನೆಗೆ ಕಾಂಗ್ರೆಸ್‌ ಪಕ್ಷ ಹೋಗದೇ ಇರುವ ನಿರ್ಧಾರ ಮಾಡಿದ್ದಕ್ಕೆ ಪಕ್ಷದಲ್ಲೇ ವಿರೋಧ ವ್ಯಕ್ತವಾಗಿದೆ. ರಾಮ ನಮ್ಮ ದೇವರು, ನಾವು ಇದನ್ನು ಒಪ್ಪೋದಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಲ್ಲಿ ಭಾಗವಹಿಸೋದು ನಮ್ಮ ಸೌಭಾಗ್ಯ ಎಂದು ಹಿಮಾಚಲ ಪ್ರದೇಶದ ಕಾಂಗ್ರೆಸ್‌ ಸಚಿವರು ಹೇಳಿದ್ದಾರೆ.
 

First Published Jan 11, 2024, 11:28 PM IST | Last Updated Jan 11, 2024, 11:28 PM IST

ಬೆಂಗಳೂರು (ಜ.11): ಅಯೋಧ್ಯೆ ಶ್ರೀರಾಮ ಮಂದಿರದ ಆಮಂತ್ರಣ ತಿರಸ್ಕಾರಕ್ಕೆ ಕಾಂಗ್ರೆಸ್‌ನಲ್ಲಿಯೇ ಭಿನ್ನರಾಗ ಶುರುವಾಗಿದೆ. ಗುಜರಾತ್,ಹಿಮಾಚಲ ಪ್ರದೇಶ ಕಾಂಗ್ರೆಸ್ ಘಟಕ ಹೈಕಮಾಂಡ್‌ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದೆ. 

ಕಾಂಗ್ರೆಸ್ ನಿರ್ಣಯ ಒಪ್ಪಲ್ಲ ಎಂದು ಪ್ರಮೋದ್ ಆಚಾರ್ಯ ಹೇಳಿದ್ದರೆ, ಜ.15ಕ್ಕೆ ಅಯೋಧ್ಯೆಗೆ ಹೋಗ್ತೀವಿ ಎಂದ ಯುಪಿ ‘ಕೈ’ ಅಧ್ಯಕ್ಷ ತಿಳಿಸಿದ್ದಾರೆ. ಆ ದಿನ ಅಲ್ಲಿರುವುದೇ ದೊಡ್ಡ ಸೌಭಾಗ್ಯ ಎಂದು ಹಿಮಾಚಲ ಪ್ರದೇಶ ಸಚಿವ ವಿಕ್ರಮಾದಿತ್ಯ ಸಿಂಗ್ ತಿಳಿಸಿದ್ದಾರೆ.

ರಾಮ ಮಂದಿರ, ಹೊಸ ಸಂಸತ್, ಜಿ20; ಕಾಂಗ್ರೆಸ್ ಬಾಯ್ಕಾಟ್ ಇತಿಹಾಸ ಬಿಚ್ಚಿಟ್ಟ ಬಿಜೆಪಿ!

ಕಾಂಗ್ರೆಸ್ ರಾಮ ವಿರೋಧಿ, ಹಿಂದೂ ವಿರೋಧಿ ಪಕ್ಷವಲ್ಲ. ಕಾಂಗ್ರೆಸ್ನಲ್ಲಿ ಕೆಲವರಿದ್ದಾರೆ.. ಇಂತಹ ನಿರ್ಣಯ ಮಾಡ್ತಾರೆ. ಇದು ಗಂಭೀರ ವಿಷಯ.. ಇಂದು ನನ್ನ ಮನಸ್ಸು ಒಡೆದುಹೋಯ್ತು. ಕೋಟ್ಯಾಂತರ ಕಾರ್ಯಕರ್ತರ ಮನಸ್ಸು ಕೂಡ ಒಡೆದಿದೆ. ಕಾಂಗ್ರೆಸ್ ನಾಯಕರ, ಕಾರ್ಯಕರ್ತರ ದೇವರು ರಾಮನೇ ಎಂದು ಕಾಂಗ್ರೆಸ್‌ ನಾಯಕ ಆಚಾರ್ಯ ಪ್ರಮೋದ್‌ ಹೇಳಿದ್ದಾರೆ.

Video Top Stories