Asianet Suvarna News Asianet Suvarna News

ಪ್ಯಾಂಗಾಂಗ್ ಲೇಕ್‌ನಿಂದ ಚೀನಾ ಸೇನೆ ಹಿಂದಕ್ಕೆ; ಜಾಗ ಖಾಲಿ ಮಾಡುತ್ತಿರುವ ವಿಡಿಯೋ ವೈರಲ್!

ಭಾರತ ಹಾಗೂ ಚೀನಾ ಲಡಾಖ್ ಬಿಕ್ಕಟ್ಟಿಗೆ ತಾತ್ಕಾಲಿಕ ಬ್ರೇಕ್ ಸಿಕ್ಕಿದೆ. ಲಡಾಖ್ ಘರ್ಷಣೆ ಬಳಿಕ ಇದೀಗ ಪ್ಯಾಂಗಾಂಗ್ ಸರೋವರದ ಉತ್ತರ ತೀರದಲ್ಲಿನ ಆರ್ಮಿ ಫಿಂಗರ್ ಪ್ರದೇಶಗಳಿಂದ ಚೀನಾ ಹಿಂದೆ ಸರಿದಿದೆ. ಚೀನಾ ಸೈನಿಕರು ಆರ್ಟಲರಿ ಗನ್ ಹಿಡಿದು ಮರಳುತ್ತಿರುವ ದೃಶ್ಯ ವೈರಲ್ ಆಗಿದೆ.

ಲಡಾಖ್(ಫೆ.16): ಭಾರತ ಹಾಗೂ ಚೀನಾ ಲಡಾಖ್ ಬಿಕ್ಕಟ್ಟಿಗೆ ತಾತ್ಕಾಲಿಕ ಬ್ರೇಕ್ ಸಿಕ್ಕಿದೆ. ಲಡಾಖ್ ಘರ್ಷಣೆ ಬಳಿಕ ಇದೀಗ ಪ್ಯಾಂಗಾಂಗ್ ಸರೋವರದ ಉತ್ತರ ತೀರದಲ್ಲಿನ ಆರ್ಮಿ ಫಿಂಗರ್ ಪ್ರದೇಶಗಳಿಂದ ಚೀನಾ ಹಿಂದೆ ಸರಿದಿದೆ. ಚೀನಾ ಸೈನಿಕರು ಆರ್ಟಲರಿ ಗನ್ ಹಿಡಿದು ಮರಳುತ್ತಿರುವ ದೃಶ್ಯ ವೈರಲ್ ಆಗಿದೆ.

ಡ್ರ್ಯಾಗನ್‌ಗೆ ಒಂದಿಂಚೂ ನೆಲ ಬಿಟ್ಟಿಲ್ಲ: ಸೇನೆ ಹಿಂದಕ್ಕೆ ಕರೆಸಿಕೊಳ್ಳಲು ಭಾರತ-ಚೀನಾ ಒಪ್ಪಂದ

ಚೀನಾ ಸೇನೆ ಸ್ಥಾಪಿಸಿದ್ದ ಬಂಕರ್‌ಗಳನ್ನು ಕೆಳಗಿಳಿಸಿದೆ.  ಶೆಡ್‌ಗಳ ಮೇಲಿನ ಶೀಟ್‌ಗಳನ್ನು ತೆಗೆದು ಸೇನಾ ವಾಹನಕ್ಕೆ ತುಂಬಿದೆ. ಇನ್ನು  ಸೈನಿಕರು ನಡೆದುಕೊಂಡು ಸೇನಾ ವಾಹನದೆಡೆಗೆ ತೆರಳುತ್ತಿರುವ ದೃಶ್ಯ ಸೆರೆಯಾಗಿದೆ.

ಯುದ್ಧ ಟ್ಯಾಂಕರ್‌ಗಳನ್ನು ಚೀನಾ ಸೇನೆ ಹಿಂತೆಗೆದುಕೊಂಡಿದೆ. ಫೆ.20ರೊಳಗೆ ಪ್ಯಾಂಗಾಂಗ್ ಸರೋವರದಿಂದ ಚೀನಾ ಸೇನೆ ಸಂಪೂರ್ಣವಾಗಿ ಹಿಂದಕ್ಕೆ ಸರಿಯಲಿದೆ ಎಂದು ಭಾರತೀಯ ಸೇನೆ ಹೇಳಿದೆ. ಉಭಯ ದೇಶಗಳು LACಯಿಂದ ಸೇನೆ ಹಿಂದಕ್ಕೆ ಕರೆಯಿಸಿಕೊಳ್ಳಲು ಮಾತುಕತೆ ಮೂಲಕ ಒಪ್ಪಿಕೊಂಡಿದೆ.

Video Top Stories