
ಭಾರತೀಯ ವಿಜ್ಞಾನಿಗಳ ಸಾಹಸಕ್ಕೆ ಸಿಕ್ಕಿದೆ ಪ್ರತಿಫಲ, ಚಂದ್ರಯಾನ3 ಲ್ಯಾಂಡಿಂಗ್‌ಗೆ ಕಾಯುತ್ತಿದೆ ವಿಶ್ವ!
ಚಂದ್ರಯಾನ3 ಯಶಸ್ವಿ ಲ್ಯಾಂಡಿಂಗ್‌ಗೆ ಶುಭಕೋರಿದ ಗಣ್ಯರು, ಚಂದ್ರಯಾನ 3 ಮಿಷನ್ ಬಜೆಟ್ 615 ಕೋಟಿ ರೂ, ಚಂದ್ರನ ದಕ್ಷಿಣ ಧ್ರುವಕ್ಕೆ ರೋವರ್ ಕಳುಹಿಸಿದ ಮೊದಲ ದೇಶ ಭಾರತ, ಚಂದ್ರಯಾನ3 ಲ್ಯಾಂಡಿಂಗ್ ಕನ್ನಡದಲ್ಲೇ ವಿವರಣೆ, ದೊಡ್ಡ ಪರದೆ ವ್ಯವಸ್ಥೆ ಸೇರಿದಂತೆ ಇಂದಿನ ಇಡೀ ದಿನದ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.
ಚಂದ್ರಯಾನ 3 ಮಿಷನ್ ಯೋಜನೆ ಯಶಸ್ಸಿಗೆ ಕೆಲವೇ ಕ್ಷಣಗಳು ಮಾತ್ರ ಬಾಕಿ. ವಿಕ್ರಮ್ ಲ್ಯಾಂಡರ್ ಯಶಸ್ವಿಯಾಗಿ ಇಳಿಸಲು ಇಸ್ರೋ ತಯಾರಿ ಮಾಡಿಕೊಂಡಿದೆ. ಯಶಸ್ವಿ ಲ್ಯಾಂಡಿಂಗಗಾಗಿ ದೇಶದ ಮೂಲೆ ಮೂಲೆಯಲ್ಲಿ ಪೂಜೆ ನಡೆದಿದೆ.ಚಂದ್ರಯಾನ3 ಮಿಷನ್ ಯೋಜನೆ ಕುತೂಹಲ ಕ್ಷಣಕ್ಷಣಕ್ಕೂ ಹೆಚ್ಚಾಗುತ್ತದೆ. ಚಂದ್ರನ ದಕ್ಷಿಣ ಧ್ರುವಕ್ಕೆ ರೋವರ್ ಕಳುಹಿಸಿದ ಮೊದಲ ದೇಶ ಭಾರತ. ಬಾಲಿವುಡ್ ಸಿನಿಮಾ ಆದಿಪುರುಷ್ 700 ಕೋಟಿ ರೂಪಾಯಿ, ಆರ್‌ಆರ್‌ಆರ್ ಸಿನಿಮಾ ಬಜೆಟ್ 550 ಕೋಟಿ ರೂಪಾಯಿ, ಹಾಲಿವುಡ್‌ನ ಅವೆಂಜರ್ಸ್ ಎಂಡ್‌ಗೇಮ್ ಸಿನಿಮಾ ಖರ್ಚು 2,900 ಕೋಟಿ ರೂಪಾಯಿ. ಆದರೆ ಚಂದ್ರಯಾನ 3 ಮಿಷನ್ ಯೋಜನೆಗೆ 615 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ. ಕಡಿಮೆ ಖರ್ಚಿನಲ್ಲಿ ಚಂದ್ರಯಾನ ಮಾಡಿದ ದೇಶ ಭಾರತ ಅನ್ನೋ ಹೆಗ್ಗಳಿಕೆಗೂ ಪಾತ್ರವಾಗಿದೆ.