News Hour: ಚಂದ್ರನೂರಿಗೆ ಭಾರತದ ತೇರು, ಇನ್ನೇನಿದ್ದರು ಗಮನ ಆಗಸ್ಟ್‌ 23!

ಆದಿಪುರುಷ್‌ ಸಿನಿಮಾ ಬಜೆಟ್‌ಗಿಂತ ಕಡಿಮೆ ವೆಚ್ಚದಲ್ಲಿ ಇಸ್ರೋ ಚಂದ್ರನತ್ತ ನೌಕೆಯನ್ನು ಕಳಿಸಿದೆ. ಇನ್ನೂ ಮಹತ್ವದ ವಿಚಾರವೆಂದರೆ, ಇದೇ ಮೊದಲ ಬಾರಿಗೆ ಚಂದ್ರನ ದಕ್ಷಿಣ ಧ್ರುವದಲ್ಲಿ ಬಾಹ್ಯಾಕಾಶ ನೌಕೆ ಇಳಿಯಲಿದೆ. ಚಂದ್ರನ ದಕ್ಷಿಣ ಧ್ರುವಕ್ಕೆ ಸೂರ್ಯನ ಬೆಳಕು ಕೂಡ ಬೀಳೋದಿಲ್ಲ.
 

Share this Video
  • FB
  • Linkdin
  • Whatsapp

ಬೆಂಗಳೂರು (ಜು.14): ಇಸ್ರೋ ತನ್ನ ಬಹುನಿರೀಕ್ಷಿತ ಚಂದ್ರಯಾನದ ಜರ್ನಿಯನ್ನು ಆರಂಭ ಮಾಡಿದೆ. ಚಂದ್ರನಿಗೂ ಭೂಮಿಗೂ ಇರುವ ಅಂತರ 3.84 ಲಕ್ಷ ಕಿಲೋಮೀಟರ್‌. ಈ ಹಾದಿಯನ್ನು ಚಂದ್ರಯಾನ-3 ಹೇಗೆ ಕ್ರಮಿಸಲಿದೆ ಎನ್ನುವ ಕುತೂಹಲ ಇಲ್ಲಿದೆ.

ಆಗಸ್ಟ್‌ 23 ರಂದು ಸಂಜೆ 5.47ಕ್ಕೆ ಇಸ್ರೋ ತನ್ನ ಲ್ಯಾಂಡರ್‌ಅನ್ನು ಚಂದ್ರನ ಮೇಲೆ ಇಳಿಸುವುದಾಗಿ ಹೇಳಿದೆ. ವಿಕ್ರಮ್‌ ಲ್ಯಾಂಡರ್‌ ಏನೆಲ್ಲಾ ಹೊತ್ತೊಯ್ದಿದೆ ಎನ್ನುವ ಕುತೂಹಲ ಎಲ್ಲರಲ್ಲೂ ಇದೆ. ಮುಖ್ಯವಾಗಿ ರೋವರ್‌. ಚಂದ್ರನ ನೆಲದಲ್ಲಿ ಈ ರೋವರ್‌ ಹೊರಬಂದಾಗ ಇಡೀ ಯೋಜನೆ ಯಶಸ್ಸು ಕಂಡಂತೆ ಎನ್ನುವುದು ನಿಜ.

ಇಸ್ರೋ ರಾಕೆಟ್‌ ಪೂಜೆ ಖಂಡಿಸಿದ ಪ್ರಗತಿಪರರಿಗೆ ಚಂದ್ರಯಾನವೇ ಗೊತ್ತಿಲ್ಲ! ಮಂಗಳಯಾನವೆಂದು ಖಂಡನೆ

ಚಂದ್ರನೂರಿಗೆ ತೆರಳುವ ನಿಟ್ಟಿನಲ್ಲಿ ಮೂರನೇ ಪ್ರಯತ್ನವಾಗಿ ಭಾರತದ ಚಂದ್ರಯಾನ-3 ಶುಕ್ರವಾರ ಯಶಸ್ವಿಯಾಗಿ ಉಡಾವಣೆಯಾಗಿದೆ. ಅದರೊಂದಿಗೆ ವಿಶ್ವದ ಮುಂದೆ ಭಾರತದ ವಿಜ್ಞಾನಿಗಳು ಮತ್ತೊಮ್ಮೆ ಶಕ್ತಿ ಪ್ರದರ್ಶನ ಮಾಡಿದ್ದಾರೆ.

Related Video