Chandrayaan 3: ಜಗತ್ತಿಗೆ ಸುದ್ದಿ ತಲುಪಿಸುವ ಮಾಧ್ಯಮದ ಮಂದಿ ಇಸ್ರೋದಲ್ಲಿ ಚಂದ್ರಯಾನ ಸಂಭ್ರಮಿಸಿದ್ದು ಹೀಗೆ!

ಬುಧವಾರ ಇಸ್ರೋದಲ್ಲಿದ್ದದ್ದು ಧಾವಂತ ಮಾತ್ರ. ವಿಕ್ರಮ್‌ ಲ್ಯಾಂಡಿಂಗ್‌ನ ಸಾಫ್ಟ್‌ ಲ್ಯಾಂಡಿಂಗ್‌ ರಿಪೋರ್ಟಿಂಗ್‌ಗಾಗಿ ಭಾರತದಾದ್ಯಂತ 350ಕ್ಕೂ ಅಧಿಕ ಮಾಧ್ಯಮಗಳು ಇಸ್ರೋದ ಇಸ್ಟ್ರಾಕ್‌ ಕಚೇರಿಗೆ ಬಂದಿದ್ದವು.
 

Share this Video
  • FB
  • Linkdin
  • Whatsapp

ಬೆಂಗಳೂರು (ಆ.23): ಸುದ್ದಿ ಕೊಡುವ ಧಾವಂತದಲ್ಲಿ ಕೆಲವೊಮ್ಮೆ ಸಂಭ್ರಮಗಳಲ್ಲಿ ಭಾಗಿಯಾಗೋದನ್ನೇ ಪತ್ರಕರ್ತರು ಮರೆತುಬಿಡುತ್ತಾರೆ. ಆದರೆ, ಬುಧವಾರ ಇಸ್ರೋದ ಇಸ್ಟ್ರಾಕ್‌ ಕೇಂದ್ರದಲ್ಲಿ ಹಾಗಗಲಿಲ್ಲ. ವಿಕ್ರಮ್‌ ಲ್ಯಾಂಡರ್‌ ಯಶಸ್ವಿಯಾಗಿ ಚಂದ್ರನ ಮೇಲೆ ಕಾಲಿಟ್ಟಿದ್ದು ಖಚಿತವಾಗಿದ್ದೇ ತಡ, ಪತ್ರಕರ್ತರ ಸಂಭ್ರಮ ಕೂಡ ಮುಗಿಲು ಮುಟ್ಟಿತ್ತು. ವಂದೇ ಮಾತರಂ, ಭಾರತ್‌ ಮಾತಾಕಿ ಜೈ ಎನ್ನುತ್ತಾ ಅವರು ಕೂಡ ಸಂಭ್ರಮಿಸಿದರು. ಸುದ್ದಿಮನೆಗೆ ಸುದ್ದಿ ನೀಡುವ ಧಾವಂತದ ನಡುವೆಯೂ ಭಾರತದ ಐತಿಹಾಸಿಕ ಕ್ಷಣದ ಭಾಗವಾಗಿದ್ದರು.

Related Video