ಕೆನಡಾದಲ್ಲಿ ಮತ್ತೆ ಮತ್ತೆ ಖಲೀಸ್ತಾನಿ ಉಗ್ರರ ಪುಂಡಾಟ; ಹಿಂದೂಗಳು, ದೇಗುಲಗಳೇ ಟಾರ್ಗೆಟ್!

ಟ್ರುಡೋ ಭಾರತವನ್ನು ದ್ವೇಷಿಸುವುದರ ಹಿಂದೆ ರಾಜಕೀಯ ಲೆಕ್ಕಾಚಾರವಿದೆ. ಪದೇ ಪದೇ ಭಾರತದ ಬಗ್ಗೆ ಟ್ರುಡೋ ಮಾತ್ನಾಡುವುದರ ಹಿಂದೆ ರಾಜಕೀಯ ತಂತ್ರಗಾರಿಕೆ ಇದೆ.
 

Share this Video
  • FB
  • Linkdin
  • Whatsapp

ಬೆಂಗಳೂರು (ನ.7): ಕೆನಡಾದಲ್ಲಿ ಹಿಂದುಗಳಿಗೆ ರಕ್ಷಣೆ ಸಿಗುತ್ತಿಲ್ಲ. ಸಿಕ್ಕ ಸಿಕ್ಕಲ್ಲಿ ಅವರ ಮೇಲೆ ದಾಳಿ ಆಗುತ್ತಿದೆ. ಖಲಿಸ್ತಾನಿಗಳಿಂದ ಹೆಚ್ಚಾಯ್ತು ಹಿಂದೂಗಳ ಮೇಲೆ ದಾಳಿ. ದೇವಸ್ಥಾನಗಳ ಮೇಲೂ ಖಲಿಸ್ತಾನಿಗಳು ದಾಳಿ ಮಾಡುತ್ತಿದ್ದಾರೆ.

ಕೆನಡಾ ವಿರುದ್ಧ ಮೊದಲ ಬಾರಿ ಪ್ರಧಾನಿ ಮೋದಿ ಗುಡುಗಿದ್ದಾರೆ. ಟೆಂಪಲ್​ ದಾಳಿ ಬೆನ್ನಲ್ಲಿಯೇ ಟ್ರುಡೋ ಮೊಸಳೆ ಕಣ್ಣೀರು ಹಾಕಿದ್ದಾರೆ. ದೊಣ್ಣೆ ಹಿಡಿದವರನ್ನು ಬಿಟ್ಟು ಏಟು ತಿಂದವರನ್ನೇ ಬಂಧಿಸುವ ಪ್ರಯತ್ನ ನಡೆಯುತ್ತಿದೆ. ಇದರ ಬೆನ್ನಲ್ಲಿಯೇ ಕೆನಡಾದ ಹಿಂದುಗಳು ಆತಂಕದಲ್ಲಿ ದಿನ ಕಳೆಯುತ್ತಿದ್ದಾರೆ.

ಕೆನಡಾದಲ್ಲಿ ಹಿಂದೂಗಳ ಮೇಲೆ ಮತ್ತು ಹಿಂದೂ ದೇವಸ್ಥಾನಗಳ ಮೇಲೆ ದಾಳಿ ನಡೆಯುತ್ತಿರೋದು ಇದೇ ಮೊದಲೇನಲ್ಲ. ಈ ಹಿಂದೆ ಕೂಡ ಅನೇಕ ಕಡೆಗಳಲ್ಲಿ ಹಿಂದೂ ದೇವಸ್ಥಾನಗಳ ಮೇಲೆ ಖಲಿಸ್ತಾನಿ ಉಗ್ರರ ದಾಳಿ ನಡೆದಿದೆ. 

Related Video