ವರದಕ್ಷಿಣೆ ಕಿರುಕುಳ ಕಾಯ್ದೆ ಮಹಿಳೆಗೆ ಸಿಕ್ಕ ನ್ಯಾಯಕ್ಕಿಂತ ಪುರುಷನಿಗಾದ ಅನ್ಯಾಯವೇ ಹೆಚ್ಚಾ?
ವರದಕ್ಷಿಣೆ ಕಿರುಕುಳ ಕಾಯ್ದೆ ಯಾರಿಗೆ ಲಾಭ? ಮಹಿಳೆಯರ ರಕ್ಷಣೆಗಾ? ಗಂಡಂದಿರ ಹಿಂಸೆಗಾ? ಸಾಲು ಸಾಲು ಪ್ರಕರಣಗಳಿಂದ ಇದೀಗ ಈ ಚರ್ಚೆ ಶುರುವಾಗಿದೆ.498ಎ ಹಾಕಿದರೆ ಏನಾಗುತ್ತೆ?
ಬೆಂಗಳೂರಿನ ಅತುಲ್ ಸುಭಾಷ್ ಸೇರಿದಂತೆ ದೇಶಾದ್ಯಂತ ನಡೆದ ಕೆಲ ಪ್ರಕರಣಗಳು ಇದೀಗ ವರದಕ್ಷಿಣೆ ಕಾಯ್ದೆಯನ್ನು ಮಹಿಳೆಯರು ಯಾವ ರೀತಿ ದುರಪಯೋಗ ಪಡಿಸುತ್ತಾರೆ ಅನ್ನೋ ವಿಚಾರದ ಮೇಲೆ ಬೆಳಕು ಚೆಲ್ಲಿದೆ. ಇದರ ಬೆನ್ನಲ್ಲೇ 498ಎ ಸೆಕ್ಷನ್ ತಿದ್ದುಪಡಿ ಅಗತ್ಯವಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಪ್ರಕರಣ ದಾಖಲಿಸುವಾಗ ಮಹಿಳೆ, ಪುರುಷನ ವಿರುದ್ದ 498ಎ ಸೆಕ್ಷನ್ ದಾಖಲಿಸಿದರೆ ಗಂಡಂದಿರ ಗೋಳು ಕೇಳೋಕೆ ಯಾರು ಇಲ್ವಾ..? ಬ್ಲಾಕ್ಮೇಲ್ ಮಾಡುವ ಅಸ್ತ್ರವಾಗ್ತಿದೀಯಾ ಇದು..? ದುರುಪಯೋಗ ಹೇಗಾಗುತ್ತಿದೆ?