ನಡೆದುಕೊಂಡು ಬರ್ತಿದ್ದ ಬಾಲಕನಿಗೆ ಕರೆಂಟ್ ಶಾಕ್‌ : ಭಯಾನಕ ದೃಶ್ಯ ಕ್ಯಾಮರಾದಲ್ಲಿ ಸೆರೆ

ದಾರಿಯಲ್ಲಿ ನಡೆದುಕೊಂಡು ಬರುತ್ತಿದ್ದ ವೇಳೆ ಬಾಲಕನೋರ್ವನಿಗೆ ಇದ್ದಕ್ಕಿದ್ದಂತೆ ವಿದ್ಯುತ್ ಶಾಕ್‌ ತಗುಲಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

First Published Aug 7, 2022, 5:24 PM IST | Last Updated Aug 7, 2022, 5:24 PM IST

ಒಮ್ಮೊಮ್ಮೆ ಕರೆಂಟ್ ಶಾಕ್‌ ಹೇಗೆ ಸಂಭವಿಸುತ್ತದೆ ಎಂದು ಹೇಳಲಾಗುವುದಿಲ್ಲ. ಧುತ್ತನೇ ಎದುರಾದ ವಿದ್ಯುತ್ ಆಘಾತಕ್ಕೆ ಒಳಗಾಗಿ ಅನೇಕರು ಕ್ಷಣದಲ್ಲಿ ಶವವಾದ, ಜೊತೆಗೆ ಗಂಭೀರವಾಗಿ ಗಾಯಗೊಂಡ ಅನೇಕ ವಿಡಿಯೋಗಳನ್ನು ನಾವು ಸಾಕಷ್ಟು ನೋಡಿದ್ದೇವೆ. ಅದೇ ರೀತಿ ಇಲ್ಲೊಂದು ಕಡೆ ಬಾಲಕರಿಬ್ಬರು ದಾರಿಯಲ್ಲಿ ನಡೆದುಕೊಂಡು ಬರುತ್ತಿರುತ್ತಾರೆ. ಈ ವೇಳೆ ದಾರಿ ಪಕ್ಕದಲ್ಲೇ ಇದ್ದ ವಿದ್ಯುತ್ ಕಂಬದ ಕೆಳಗೆ ಬಾಲಕ ಇದ್ದಕ್ಕಿದಂತೆ ಕರೆಂಟ್ ಶಾಕ್‌ಗೊಳಗಾಗಿ ಕೆಳಗೆ ಬೀಳುತ್ತಾನೆ. ಕೂಡಲೇ ಅಲ್ಲಿಗೆ ಬಂದ ಯುವಕನೊಬ್ಬ ದೊಣ್ಣೆಯಿಂದ ಆ ಬಾಲಕನನ್ನು ಪಕ್ಕಕ್ಕೆ ಸರಿಸುತ್ತಾನೆ. ಬಳಿಕ ಕೂಡಲೇ ಆಸ್ಪತ್ರೆಗೆ ಸಾಗಿಸುತ್ತಾರೆ. ವಿದ್ಯುತ್ ಆಘಾತಕ್ಕೊಳಗಾದರೂ ಬಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಆದರೆ ಆತನ ದೇಹಕ್ಕೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಓಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.