Asianet Suvarna News Asianet Suvarna News

'ಕೆಂಪುಕೋಟೆಯಲ್ಲಿ ಸಿಖ್ ಧ್ವಜ, ಪ್ರತಿಭಟನೆ ಹಿಂದೆ ದೇಶ ವಿರೋಧಿಗಳ ಷಡ್ಯಂತ್ರವಿದೆ'

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ರೈತರ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಸರ್ಕಾರದ ವಿರುದ್ಧ ರೈತರ ಆಕ್ರೋಶ ಭುಗಿಲೆದ್ದಿದೆ. ಕೆಂಪುಕೋಟೆ ಮೇಲೆ ಸಿಖ್ ಬಾವುಟವನ್ನು ಹಾರಿಸಿದ್ದಾರೆ. ಈ ಹೋರಾಟ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. 

ನವದೆಹಲಿ (ಜ. 26): ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ರೈತರ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಸರ್ಕಾರದ ವಿರುದ್ಧ ರೈತರ ಆಕ್ರೋಶ ಭುಗಿಲೆದ್ದಿದೆ. ಕೆಂಪುಕೋಟೆ ಮೇಲೆ ಸಿಖ್ ಬಾವುಟವನ್ನು ಹಾರಿಸಿದ್ದಾರೆ. ಈ ಹೋರಾಟ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. 

ಗಣತಂತ್ರದಂದು ರಾಷ್ಟ್ರ ರಾಜಧಾನಿಯಲ್ಲಿ ಅನ್ನದಾತನ ಕಿಚ್ಚ: ರೈತನ ಕೋಪಕ್ಕೆ ಪೊಲೀಸರು ತತ್ತರ!

'ಸರ್ಕಾರ ರೈತರ ಜೊತೆ ಸಂಧಾನ ನಡೆಸಿದೆ. ಒಂದೂವರೆ ವರ್ಷದವರೆಗೆ ಕೃಷಿ ಕಾಯ್ದೆ ಜಾರಿಗೊಳಿಸುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದರೂ, ರೈತರು ಈ ರೀತಿ ದಂಗೆ ಏಳುತ್ತಾರೆ ಅಂದರೆ ಇದರ ಹಿಂದೆ ದೇಶ ವಿರೋಧಿಗಳ ಷಡ್ಯಂತ್ರವಿದೆ. ಕೆಲವರ ಕೈವಾಡವಿದೆ. ಇವರೆಲ್ಲರಿಗೂ ಸಿಂಹಸ್ವಪ್ನ ಪ್ರಧಾನಿ ಮೋದಿ. ಅವರ ಹೆಸರಿಗೆ ಮಸಿ ಬಳಿಯುವ ಪ್ರಯತ್ನ ನಡೆಯುತ್ತದೆ' ಎಂದು ಬಿಜೆಪಿ ವಕ್ತಾರ ಗೋ. ಮಧುಸೂದನ್ ಹೇಳಿದ್ದಾರೆ.