PM Modi Birthday: ಮೋದಿ ಬರ್ತ್ ಡೇಗೆ ಭರ್ಜರಿಯಾಗಿ ರೆಡಿಯಾಗಿದೆ ಕಮಲ ಪಡೆ..!

ಮೋದಿ ಬರ್ತ್ ಡೇಗೆ ಭರ್ಜರಿಯಾಗಿ ರೆಡಿಯಾಗಿದೆ ಕಮಲ ಪಡೆ. ಸೆಪ್ಟೆಂಬರ್ 17ರಿಂದ ಅಕ್ಟೋಬರ್ 2ರ ವರೆಗೆ ಮೋದಿ ಹೆಸರಲ್ಲಿ ಹೇಗೆ ನಡೆಯಲಿದೆ ಗೊತ್ತಾ ಸೇವಾ ಪಾಕ್ಷಿಕ..? ಮೋದಿ ಜನ್ಮದಿನ ಒಂದೊಂದು ವರ್ಷವೂ ಒಂದೊಂದು ಸ್ಪೆಷಲ್.. ಈ ಬಾರಿಯಂತೂ ಸೂಪರ್ ಸ್ಪೆಷಲ್.

Share this Video
  • FB
  • Linkdin
  • Whatsapp

ಬೆಂಗಳೂರು (ಸೆ. 16): ನರೇಂದ್ರ ಮೋದಿ ಪ್ರಧಾನಿಯಾದ ದಿನದಿಂದಲೂ, ಅವರ ಜನ್ಮದಿನವನ್ನು ಬಿಜೆಪಿ ವಿಶೇಷವಾಗಿ ಆಚರಿಸಿದೆ. ಶನಿವಾರ 72ನೇ ವರ್ಷಕ್ಕೆ ಕಾಲಿಡಲಿರುವ ಪ್ರಧಾನಿ ಮೋದಿಯ ಜನ್ಮದಿನವನ್ನೂ ಇನ್ನಷ್ಟು ಸ್ಪೆಷಲ್‌ ಆಗಿ ಮಾಡಲು ಬಿಜೆಪಿ ಸಜ್ಜಾಗಿದೆ. ಅಂದಾಜು ಅಕ್ಟೋಬರ್‌ 2 ರ ತನಕ ಮೋದಿ ಜನ್ಮದಿನದ ಉತ್ಸವ ನಡೆಸೋಕೆ ಬಿಜೆಪಿ ರೆಡಿಯಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮ ದಿನ, ಪ್ರತಿವರ್ಷವೂ ಒಂದಲ್ಲಾ ಒಂದು ಕಾರಣಕ್ಕೆ ಸ್ಪೆಷಲ್ ಅನ್ನಿಸಿಕೊಳ್ಳುತ್ತೆ.. ಮೋದಿಯವರು ಪ್ರಧಾನಿಯಾದಾಗಿನಿಂದಲೂ, ಸೆಪ್ಟಂಬರ್ 17 ಅನ್ನೋ ಆ ಸ್ಪೆಷಲ್ ಡೇ ಭಿನ್ನ ಭಿನ್ನವಾಗಿ ಆಚರಿಸಲ್ಪಟ್ಟಿದೆ. ಎಲ್ಲಿಯೂ ವೈಯಕ್ತಿಕ ವಿಜೃಂಭಣೆಗೆ ಇಳಿಯದೆ ಜನ್ಮದಿನವನ್ನು ಆಚರಿಸಲಾಗುತ್ತದೆ.

PM Modi Birthday: ಬಡ ಜನರ 'ಅಚ್ಚೇದಿನ್‌' ಸಲುವಾಗಿ ಪ್ರಧಾನಿ ಮೋದಿ ಘೋಷಿಸಿದ 10 ಯೋಜನೆಗಳು

ಮೋದಿ ಅವರ ಇಷ್ಟೂ ವರ್ಷಗಳ ಬರ್ತ್ ಡೇಗೆ ಹೋಲಿಸಿದ್ರೆ, ಈ ಸಲದ ಬರ್ತ್ ಡೇ ಫುಲ್ ಡಿಫರೆಂಟ್. ಮುಂಬರುವ ಲೋಕಸಭೆ ಚುನಾವಣೆಯ ದೃಷ್ಟಿಯಲ್ಲಿಟ್ಟುಕೊಂಡೇ ಅದ್ದೂರಿಯಾಗಿ ಮೋದಿ ಜನ್ಮದಿನವನ್ನು ಆಚರಿಸಲು ಬಿಜೆಪಿ ತೀರ್ಮಾನಿಸಿದೆ.

Related Video