Asianet Suvarna News Asianet Suvarna News

ಬಿಹಾರದಲ್ಲಿ ಬಿಜೆಪಿ ಗೆದ್ದರೆ ಉಚಿತ ಕೊರೊನಾ ಲಸಿಕೆ: ಏನಿದು ಅಸಂಬದ್ಧ ಪ್ರಣಾಳಿಕೆ?

ಜನರು ಕುತೂಹಲದಿಂದ ಕಾಯುತ್ತಿರುವ ಕೊರೊನಾ ಲಸಿಕೆಯನ್ನು ರಾಜಕೀಯ ಪಕ್ಷಗಳು ತಮ್ಮ ಲಾಭಕ್ಕಾಗಿ ಬಳಸಿಕೊಳ್ಳುತ್ತಿದೆ. ಬಿಹಾರ ಚುನಾವಣೆಯಲ್ಲಿ ಬಿಜೆಪಿ ಗೆದ್ದರೆ ಉಚಿತವಾಗಿ ಕೋವಿಡ್ ಲಸಿಕೆಯನ್ನು ನೀಡುತ್ತೇವೆ ಎಂದು ಬಿಜೆಪಿ ಪ್ರಣಾಳಿಕೆಯಲ್ಲಿ ಹೇಳಿರುವುದು ವಿವಾದಕ್ಕೆ ಕಾರಣವಾಗಿದೆ. 

ಬೆಂಗಳೂರು (ಅ. 23): ಜನರು ಕುತೂಹಲದಿಂದ ಕಾಯುತ್ತಿರುವ ಕೊರೊನಾ ಲಸಿಕೆಯನ್ನು ರಾಜಕೀಯ ಪಕ್ಷಗಳು ತಮ್ಮ ಲಾಭಕ್ಕಾಗಿ ಬಳಸಿಕೊಳ್ಳುತ್ತಿದೆ. ಬಿಹಾರ ಚುನಾವಣೆಯಲ್ಲಿ ಬಿಜೆಪಿ ಗೆದ್ದರೆ ಉಚಿತವಾಗಿ ಕೋವಿಡ್ ಲಸಿಕೆಯನ್ನು ನೀಡುತ್ತೇವೆ ಎಂದು ಬಿಜೆಪಿ ಪ್ರಣಾಳಿಕೆಯಲ್ಲಿ ಹೇಳಿರುವುದು ವಿವಾದಕ್ಕೆ ಕಾರಣವಾಗಿದೆ. 

ಇನ್ನೂ ಕೋವಿಡ್ ಲಸಿಕೆ ತಯಾರಾಗಿಲ್ಲ. ಅದರ ಬೆಲೆ ನಿಗದಿಯಾಗಿಲ್ಲ. ವಿತರಣಾ ವ್ಯವಸ್ಥೆ ಬಗ್ಗೆ ಪ್ಲಾನ್ ಮಾಡಲಾಗಿಲ್ಲ. ಹಾಗಿರುವಾಗ ಪ್ರಣಾಳಿಕೆಯಲ್ಲಿ ಹೇಳಿರುವುದು ಚರ್ಚಾಸ್ಪದವಾಗಿದೆ. ಕೇಂದ್ರ ಸರ್ಕಾರ ಜಿಎಸ್‌ಟಿಯ ಬಾಕಿ ಹಣ ಕೊಡಲು ನಮ್ಮ ಬಳಿ ದುಡ್ಡಿಲ್ಲ. ನೀವು ಹೊರಗಡೆಯಿಂದ ಸಾಲ ತೆಗೆದುಕೊಳ್ಳಿ. ನಮ್ಮ ಬಳಿ ಹಣವಿಲ್ಲ ಎಂದು ರಾಜ್ಯ ಸರ್ಕಾರಕ್ಕೆ ಹೇಳಿತ್ತು. ಆದರೆ ಈಗ ಹಣ ಎಲ್ಲಿಂದ ಬರುತ್ತದೆ' ಎಂಬ ಪ್ರಶ್ನೆಯೂ ಎದ್ದಿದೆ.