ಬಿಹಾರದಲ್ಲಿ ಮೋದಿಗೆ ಎದುರಾಗಿದೆ ಅಗ್ನಿಪರೀಕ್ಷೆ: ನಿತೀಶ್‌ ಕುಮಾರ್‌ಗೆ ಸಿಗುತ್ತಾ ಮತದಾರರ ಶ್ರೀರಕ್ಷೆ?

ಬಿಹಾರ ವಿಧಾನಸಭಾ ಚುನಾವಣೆಗೆ ಸಜ್ಜಾಗಿದೆ. ಚಿರಾಜ್ ಪಾಸ್ವಾನ್ ಅವರ ಲೋಕ ಜನಶಕ್ತಿ, ತೇಜಸ್ವಿ ಯಾದವ್ ಅವರ ರಾಷ್ಟ್ರೀಯ ಜನತಾ ದಳ, ಇನ್ನೊಂದು ನಿತೀಶ್ ಕುಮಾರ್ ಅವರ ಸಂಯುಕ್ತ ಜನತಾದಳ. ಈ ಮೂರು ಪಕ್ಷಗಳ ನಡುವೆ ತ್ರಿಕೋನ ಸ್ಪರ್ಧೆ ಶುರುವಾಗಿದೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಅ. 29): ಬಿಹಾರ ವಿಧಾನಸಭಾ ಚುನಾವಣೆಗೆ ಸಜ್ಜಾಗಿದೆ. ಚಿರಾಜ್ ಪಾಸ್ವಾನ್ ಅವರ ಲೋಕ ಜನಶಕ್ತಿ, ತೇಜಸ್ವಿ ಯಾದವ್ ಅವರ ರಾಷ್ಟ್ರೀಯ ಜನತಾ ದಳ, ಇನ್ನೊಂದು ನಿತೀಶ್ ಕುಮಾರ್ ಅವರ ಸಂಯುಕ್ತ ಜನತಾದಳ. ಈ ಮೂರು ಪಕ್ಷಗಳ ನಡುವೆ ತ್ರಿಕೋನ ಸ್ಪರ್ಧೆ ಶುರುವಾಗಿದೆ. 

ಎಲ್ಲಾ ಭಾರತೀಯರಿಗೆ ಕೊರೊನಾ ಲಸಿಕೆ, ಇದು ಮೋದಿ ಭರವಸೆ!

ಬಿಹಾರದಲ್ಲಿ ಜನ ಬದಲಾವಣೆಯನ್ನು ಬಯಸುತ್ತಿದ್ದಾರೆ. ನಿತೀಶ್ ಕುಮಾರ್ ಕೆಳಗಿಳಿಯಬೇಕು ಎಂಬ ಮಾತು ಕೇಳಿ ಬರುತ್ತಿದೆ. ಇದನ್ನೇ ವಿಪಕ್ಷಗಳು ಅಸ್ತ್ರವನ್ನಾಗಿ ಮಾಡಿಕೊಂಡಿವೆ. ಆಡಳಿತ ವಿರೋಧಿ ಅಲೆಯನ್ನು ಹತ್ತಿಕ್ಕುವುದು ನಿತೀಶ್ ಕುಮಾರ್ ಬಣಕ್ಕೆ ದೊಡ್ಡ ಸವಾಲಾಗಿದೆ. ಇದು ನಿತೀಶ್‌ ಕುಮಾರ್‌ಗೆ ಮಾತ್ರವಲ್ಲ. ಮೋದಿಗೂ ದೊಡ್ಡ ಅಗ್ನಿ ಪರೀಕ್ಷೆಯಾಗಿದೆ. ಇದನ್ನು ಹೇಗೆ ಎದುರಿಸುತ್ತಾರೆ? ಕಾದು ನೋಡಬೇಕಿದೆ. 

Related Video