ಕೂಲಿ ಕಾರ್ಮಿಕರಂತೆ ನಟಿಸಿ ರಾಮೇಶ್ವರಂ ಬ್ಲಾಸ್ಟ್ ಉಗ್ರರ ಸುಳಿವು ನೀಡಿದ ಗುಪ್ತಚರ ಅಧಿಕಾರಿ!

ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಇಟ್ಟ ಉಗ್ರ,ಮಾಸ್ಟರ್ ಮೈಂಡ್ ಅರೆಸ್ಟ್, ಮಂಗಳೂರು ಕುಕ್ಕರ್ ಬ್ಲಾಸ್ಟ್, ಶಿವಮೊಗ್ಗ ಗಲಭೆ, ಬೆಂಗಳೂರು ಸ್ಫೋಟ ಎಲ್ಲದರ ಹಿಂದೆ ಒಂದೇ ತಂಡ, ಸೊರಗಿದ ಮಾಲ್ಡೀವ್ಸ್, ಭಾರತದಲ್ಲಿ ರೋಡ್ ಶೋಗೆ ಪ್ಲಾನ್ ಸೇರಿದಂತೆ ಇಂದಿನ ಇಡೀ ದಿನದ ಪ್ರಮುಖ ಸುದ್ದಿ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.
 

First Published Apr 12, 2024, 11:09 PM IST | Last Updated Apr 12, 2024, 11:09 PM IST

ಬೆಂಗಳೂರಿನ ರಾಮೇಶ್ವರಂ ಬಾಂಬ್ ಸ್ಫೋಟ ಪ್ರಕರಣ ದೇಶಾದ್ಯಂತ ಆತಂಕ ಸೃಷ್ಟಿಸಿತ್ತು. ಭಾರಿ ಯೋಜನೆ ರೂಪಿಸಿ ಬಾಂಬ್ ಸ್ಫೋಟಿಸಲಾಗಿತ್ತು. ಬಳಿಕ ಅಷ್ಟೇ ನಾಜೂಕಾಗಿ ಎಸ್ಕೇಪ್ ಆಗಿದ್ದ ಉಗ್ರರು ಪತ್ತೆಗೆ ಎನ್ಐಎ ಅಧಿಕಾರಿಗಳು ಬಲೆ ಬೀಸಿದ್ದರು. ಇದೀಗ ಬಾಂಬ್ ಇಟ್ಟ ಮುಸಾವೀರ್ ಹಾಗೂ ಮಾಸ್ಟರ್ ಮೈಂಡ್ ಮತಿನ್ ತಾಹ ಇಬ್ಬರನ್ನು ಪಶ್ಚಿಮ ಬಂಗಾಳದಲ್ಲಿ ಎನ್‌ಐಎ ಬಂಧಿಸಿದೆ. ಈ ಇಬ್ಬರು ಉಗ್ರರು ಶಿವಮೊಗ್ಗದ ತೀರ್ಥಹಳ್ಳಿ ಮೂಲದವರು. ಬಾಂಬ್ ಸ್ಫೋಟದ ಬಳಿಕ ಭಾರತೀಯ ಗುಪ್ತಚರ ಇಲಾಖೆ ತೀವ್ರ ಕಟ್ಟೆಚ್ಚರ ವಹಿಸಿತ್ತು. ಇದೇ ವೇಳೆ ಕೂಲಿ ಕಾರ್ಮಿಕರಂತೆ ನಟಿಸಿ ಪಶ್ಚಿಮ ಬಂಗಾಳದಲ್ಲಿ ಕಾರ್ಯಾಚರಣೆ ನಡೆಸಿದ ಗುಪ್ತಚರ ಇಲಾಖೆ ಅಧಿಕಾರಿಗಳು ಉಗ್ರರ ಸುಳಿವನ್ನು ಎನ್ಐಎ ನೀಡಿತ್ತು. ಎನ್ಐಎ ಅಧಿಕಾರಿಗಳು ರಾತ್ರೋರಾತ್ರಿ ಇಬ್ಬರು ಉಗ್ರರನ್ನು ಅರೆಸ್ಟ್ ಮಾಡಿದೆ. ಹಿಂದೂ ಹೆಸರುಗಳನ್ನಿಟ್ಟುಕೊಂಡು ನಕಲಿ ದಾಖಲೆ ಸೃಷ್ಟಿಸಿ ಈ ಉಗ್ರರು ಭಯೋತ್ಪಾದನೆ ನಡೆಸುತ್ತಿದ್ದರು.