
ಎಲ್ಲಿವರೆಗೆ ಬಂತು ರಾಮಮಂದಿರ ನಿರ್ಮಾಣ ಕಾರ್ಯ? ಏಷ್ಯಾನೆಟ್ ನ್ಯೂಸ್ ನಲ್ಲಿ Exclusive
ರಾಮಮಂದಿರ ನಿರ್ಮಾಣದ ಕನಸು, ನನಸಾಗುವ ಸಮಯ ಸನ್ನಿಹಿತವಾಗಿದೆ. ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ, ನಿರ್ಮಾಣ ಕಾಮಗಾರಿ ಭರದಿಂದ ಸಾಗುತ್ತಿದೆ. 2023, ಡಿಸಂಬರ್ ಒಳಗಾಗಿ ರಾಮಮಂದಿರ ಗರ್ಭಗುಡಿ ನಿರ್ಮಾಣ ಪೂರ್ಣವಾಗಲಿದೆ.
ಬೆಂಗಳೂರು (ಏ. 30): ರಾಮಮಂದಿರ (Ram Mandir) ನಿರ್ಮಾಣದ ಕನಸು, ನನಸಾಗುವ ಸಮಯ ಸನ್ನಿಹಿತವಾಗಿದೆ. ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ (Ayodhya) ನಿರ್ಮಾಣ ಕಾಮಗಾರಿ ಭರದಿಂದ ಸಾಗುತ್ತಿದೆ. 2023, ಡಿಸಂಬರ್ ಒಳಗಾಗಿ ರಾಮಮಂದಿರ ಗರ್ಭಗುಡಿ ನಿರ್ಮಾಣ ಪೂರ್ಣವಾಗಲಿದೆ.
ಏಷ್ಯಾನೆಟ್‌ನೆಟ್ ನ್ಯೂಸ್‌ನ ರಾಜೇಶ್ ಕಾರ್ಲಾ (Rajesh Kalra) ರಾಮಮಂದಿರ ನಿರ್ಮಾಣ ಸ್ಥಳಕ್ಕೆ ಭೇಟಿ ನೀಡಿದ್ದರು. ಈ ವೇಳೆ ರಾಮಮಂದಿರ ಟ್ರಸ್ಟ್ ಅಧ್ಯಕ್ಷ ನೃಪೇಂದ್ರ ಮಿಶ್ರಾ (Nripendra) ಎಕ್ಸ್‌ಕ್ಲೂಸಿವ್ ಸಂದರ್ಶನ ನೀಡಿದ್ದಾರೆ. ಈಗಾಗಲೇ ನಿಗದಿಯಾಗಿರುವ ಸಮಯದಲ್ಲಿ ನಿರ್ಮಾಣ ಕಾರ್ಯ ಪೂರ್ಣವಾಗುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇನ್ನು ರಾಮಮಂದಿರ ತಳಪಾಯ ನಿರ್ಮಾಣಕ್ಕೆ ಕರ್ನಾಟಕದಿಂದ ಗ್ರಾನೈಟ್ ಕಳುಹಿಸಿಕೊಡಲಾಗುತ್ತದೆ ಎಂಬುದು ಹೆಮ್ಮೆಯ ವಿಚಾರ. ರಾಮಮಂದಿರ ನಿರ್ಮಾಣದ ತುಣುಕುಗಳು, ಅಲ್ಲಿನ ವಿಶೇಷತೆ, ಹೇಗಿರಲಿದೆ ಗರ್ಭಗುಡಿ ಎಲ್ಲವನ್ನೂ ಕಣ್ತುಂಬಿಕೊಳ್ಳಲು ತಪ್ಪದೇ ನೋಡಿ ವಿಶೇಷ ಸಂದರ್ಶನ.