News Hour: 84 ಸೆಕೆಂಡ್‌ನಲ್ಲಿಯೇ ಮುಗಿಯಲಿದೆ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ!

ಅಯೋಧ್ಯೆಯಲ್ಲಿ ನಿರ್ಮಿಸಲಾಗಿರುವ ಶ್ರೀರಾಮ ಮಂದಿರದಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಕೇವಲ 84 ಸೆಕೆಂಡ್‌ನಲ್ಲಿಯೇ ಮುಕ್ತಾಯವಾಗಲಿದೆ. ಕಾಶಿ ಪಂಡಿತ್‌ ಗಣೇಶ್ವರ್‌ ಶಾಸ್ತ್ರಿ ಸೂಚಿಸಿರುವ ಮುಹೂರ್ತ ಇದಾಗಿದೆ. ಇದಕ್ಕೂ ಮುನ್ನ ಆರು ದಿನ ಮೊದಲೇ ಪೂಜೆ ಪುನಸ್ಕಾರಗಳು ಆರಂಭವಾಗಲಿದೆ.

First Published Dec 30, 2023, 11:45 PM IST | Last Updated Dec 30, 2023, 11:45 PM IST

ಬೆಂಗಳೂರು (ಡಿ.30): ರಾಮನೂರು ಅಯೋಧ್ಯೆ ಪ್ರಾಣ ಪ್ರತಿಷ್ಠಾಪನೆಗೆ ಸಜ್ಜಾಗುತ್ತಿದೆ. ಇದರ ನಡುವೆ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ವಿವರಗಳು ಬರಲಾರಂಭಿಸಿವೆ.

ಬಾಲ ರಾಮನ ಪ್ರಾಣ ಪ್ರತಿಷ್ಠಾಪನೆ ಕೇವಲ 84 ಸೆಕೆಂಡ್‌ನಲ್ಲಿಯೇ ಮುಕ್ತಾಯವಾಗಲಿದೆ. ಕಾಶಿ ಪಂಡಿತ್‌ ಗಣೇಶ್ವರ್‌ ಶಾಸ್ತ್ರಿ ಸೂಚಿಸಿರುವ ಮುಹೂರ್ತ ಇದಾಗಿದೆ. ಇದಕ್ಕೂ ಮುನ್ನ ಆರು ದಿನ ಮೊದಲೇ ಪೂಜೆ ಪುನಸ್ಕಾರಗಳು ಆರಂಭವಾಗಲಿದೆ.

ಶ್ರೀರಾಮ ಭಕ್ತರಿಗೆ ಅಯೋಧ್ಯೆಯಿಂದ ಪ್ರಧಾನಿ ಮೋದಿ ವಿಶೇಷ ಮನವಿ!

ಜನವರಿ 22ರ ಮಧ್ಯಾಹ್ನ 12.29ರ 8 ಸೆಕೆಂಡ್‌ನಿಂದ 12.30ರ 32 ಸೆಕೆಂಡ್ ಮುಹೂರ್ತದಲ್ಲಿ ಕಾರ್ಯ ನಡೆಯಲಿದೆ. ಅಭಿಜಿತ್ ಶುಭ ಮುಹೂರ್ತದ ಪ್ರತಿಷ್ಠಾಪನಾ ಕಾರ್ಯಕ್ರಮ ನಡೆಯಲಿದೆ. ಇದಕ್ಕೂ ಮುನ್ನ ಜನವರಿ 16 ರಂದು ಸರಯೂ ನದಿಗೆ ಮೊದಲ ವಿಶೇಷ ಪೂಜೆಯನ್ನು ಸಲ್ಲಿಸಿ ಕಾರ್ಯಗಳನ್ನು ಆರಂಭಿಸಲಾಗುತ್ತದೆ.