ನಾಗರೀಕತೆಯ ಪುನರುತ್ಥಾನ, ರಾಮ ಮಂದಿರ ಲೋಕಾರ್ಪಣೆಗೆ ಕೋಚ್ ಪುಲ್ಲೇಲ ಗೋಪಿಚಂದ್ ಸಂತಸ!

ರಾಮ ಮಂದಿರ ಪ್ರಾಣಪ್ರತಿಷ್ಠೆಯಲ್ಲಿ ಪಾಲ್ಗೊಳ್ಳುವ ಅವಾಕಾಶ ಸಿಕ್ಕಿರುವುದೇ ನನ್ನ ಭಾಗ್ಯ. ಅದೇ ರೀತಿ ಈ ಪೀಳಿಗೆಗೆ ಶ್ರೀರಾಮ ಮಂದಿರ ನೋಡುವ ಭಾಗ್ಯ ಸಿಕ್ಕಿದೆ ಎಂದು ರಾಷ್ಟ್ರೀಯ ಬ್ಯಾಡ್ಮಿಂಟನ್ ಕೋಚ್ ಹೇಳಿದ್ದಾರೆ. ಏಷ್ಯಾನೆಟ್ ಸುವರ್ಣನ್ಯೂಸ್ ಜೊತೆ ಮಾತನಾಡಿದ ಗೋಪಿಚಂದ್, ಸತತ ದಾಳಿ ನಡುವೆ ಮಂದಿರ ಎದ್ದು ನಿಂತು ನಾಗರೀಕತೆಯ ಪುನರುತ್ಥಾನದ ಸಂಕೇತ ನೀಡಿದ ಪರಿಯನ್ನು ಶ್ಲಾಘಿಸಿದ್ದಾರೆ.

First Published Jan 23, 2024, 9:19 PM IST | Last Updated Jan 23, 2024, 9:19 PM IST

ಬಾಬರ್, ಔರಂಗಜೇಬ್, ಬ್ರಿಟಿಷರು ಸೇರಿದಂತೆ ಸತತ ದಾಳಿಯಾದರೂ ನಮ್ಮ ನಾಗರೀಕತೆಯನ್ನು ಉಳಿಸಿಕೊಂಡು ಮುಂದುವರಿಸಿಕೊಂಡು ಬರುವಲ್ಲಿ ನಮ್ಮ ಪೂರ್ವಜರ ಕೊಡುಗೆ ಅಪಾರ. ಇದೇ ರೀತಿ, ರಾಮ ಮಂದಿರ ಹೋರಾಟದಲ್ಲೂ 500 ವರ್ಷಗಳ ಕಾಲ ಹೋರಾಟ ನಡೆದಿದೆ. ಇದೀಗ ಭವ್ಯ ರಾಮ ಮಂದಿರ ನಿರ್ಣಮಾಣವಾಗುವ ಮೂಲಕ ನಮ್ಮ ನಾಗರೀಕತೆ ಪುನರುತ್ಥಾನಕ್ಕೆ ಮುನ್ನುಡಿ ಬರೆಯಲಾಗಿದೆ ಎಂದು ರಾಷ್ಟ್ರೀಯ ಬ್ಯಾಡ್ಮಿಂಟನ್ ಕೋಚ್ ಪುಲ್ಲೇಲ ಗೋಪಿಚಂದ್ ಹೇಳಿದ್ದಾರೆ. ಪ್ರಾಣಪ್ರತಿಷ್ಠೆಯಲ್ಲಿ ಪಾಲ್ಗೊಂಡು ಬಾಲರಾಮನ ದರ್ಶನ ಪಡೆದ ಗೋಪಿಚಂದ್ ಸಂತಸ ವ್ಯಕ್ತಪಡಿಸಿದ್ದಾರೆ. ಏಷ್ಯಾನೆಟ್ ಸುವರ್ಣನ್ಯೂಸ್ ಜೊತೆ ಪುಲ್ಲೇಲ್ ಗೋಪಿಚಂದ್ ಎಕ್ಸ್‌ಕ್ಲೂಸೀವ್ ಮಾತುಕತೆ ಇಲ್ಲಿದೆ.
 

Video Top Stories