Galwan Clash: ಗಲ್ವಾನ್ ಕಣಿವೆಯಲ್ಲಿ ಚೀನಾದ ರಹಸ್ಯ ಬಯಲು ಮಾಡಿದ ಆಸೀಸ್ ಪತ್ರಿಕೆ!

 ಜಗತ್ತಿನ ಮುಂದೆ ಬೆತ್ತಲಾದ ಚೀನಾ
* ಗಲ್ವಾನ್ ಸಂಘರ್ಷದ ವಿಚಾರದಲ್ಲಿ ಚೀನಾದ ಸುಳ್ಳಿನ ಮೂಟೆ
* ಆಸ್ಟ್ರೇಲಿಯಾ ಪತ್ರಿಕೆ ದಿ ಕ್ಲಾಕ್ಸನ್ ನ ತನಿಖಾ ವರದಿಯಲ್ಲಿ ಬಹಿರಂಗ
 

First Published Feb 4, 2022, 7:49 PM IST | Last Updated Feb 4, 2022, 7:49 PM IST

ಬೆಂಗಳೂರು (ಫೆ. 4): ಭಾರತ (India) ಹಾಗೂ ಚೀನಾ (China) ಸೈನಿಕರ ನಡುವೆ ಗಲ್ವಾನ್ ಕಣಿವೆಯಲ್ಲಿ (Galwan Vally) ನಡೆದ ಸಂಘರ್ಷದಲ್ಲಿ ತನ್ನ 20 ಸೈನಿಕರು ಮೃತರಾಗಿದ್ದಾರೆ ಎಂದು ಘೋಷಿಸಿದ್ದ ಭಾರತ ಅವರೆಲ್ಲರ ಶೌರ್ಯ ಮೆಚ್ಚಿ ಭಾರತ ಸರ್ಕಾರ ಪ್ರಶಸ್ತಿಗಳನ್ನು ಪ್ರದಾನ ಮಾಡಿತ್ತು. ಆದರೆ, ಚೀನಾ ತನ್ನ ಯಾವೊಬ್ಬ ಸೈನಿಕನೂ ಮೃತನಾಗಿಲ್ಲ ಎಂದು ಮೊದಲು ಹೇಳಿದ್ದರೆ, ಕೆಲ ತಿಂಗಳ ಬಳಿಕ 4 ಸೈನಿಕರಿಗೆ ಮರಣೋತ್ತರ ಪದಕಗಳನ್ನು ನೀಡುವ ಮೂಲಕ ತನ್ನ ಸೈನಿಕರು ಸಾವಿಗೀಡಾಗಿದ್ದನ್ನು ಒಪ್ಪಿಕೊಂಡಿತ್ತು. ಆದರೆ, ಈ ಸಂಘರ್ಷದಲ್ಲಿ 4ರ ಬದಲಾಗಿ ಚೀನಾದ 38 ಇತರ ಸೈನಿಕರು ಗಲ್ವಾನ್ ಕಣಿವೆಯಲ್ಲಿ ಕೊಚ್ಚಿ ಹೋಗಿದ್ದಾರೆ ಎಂದು ಆಸ್ಟ್ರೇಲಿಯಾದ ದಿ ಕ್ಲಾಕ್ಸನ್ (The Klaxon) ಪತ್ರಿಕೆ ವರದಿ ಮಾಡಿದೆ.

Galwan Clash : ಚೀನಾದ ಹೆಚ್ಚಿನ ಸೈನಿಕರ ಸಾವು ಎಂದು ಆಸ್ಟ್ರೇಲಿಯಾ ಪತ್ರಿಕೆಯ ತನಿಖಾ ವರದಿ!
ಅಂದಾಜು ಒಂದು ವರ್ಷಗಳ ಕಾಲ, ತನ್ನ ಸಾಮಾಜಿಕ ಜಾಲ ತಾಣದ ಸಂಶೋಧಕರಿಂದ ವಿವಿಧ ಬ್ಲಾಗರ್ಸ್ ಗಳು, ಚೀನಾದ ಪ್ರಮುಖ ಪತ್ರಿಕೆಗಳ ಸುದ್ದಿಗಳನ್ನು ಅಧ್ಯಯನ ಮಾಡಿದ ತಂಡ, ಗಲ್ವಾನ್ ಕಣಿವೆಯಲ್ಲಿ ಅಂದು ಆಗಿದ್ದೇನು ಎನ್ನುವ ವಿಚಾರವಣು ಎಳೆಎಳೆಯಾಗಿ ವರದಿ ಮಾಡಿದೆ. ಭಾರತ  ಕೂಡ ಚೀನಾದ 40ಕ್ಕೂ ಅಧಿಕ ಸೈನಿಕರು ಮೃತಪಟ್ಟಿದ್ದಾರೆ ಎಂದು ಹೇಳಿದ್ದರೂ, ಚೀನಾ ಅದನ್ನು ಒಪ್ಪಿರಲಿಲ್ಲ. ರಷ್ಯಾದ ಪ್ರಮುಖ ಪತ್ರಿಕೆಯೂ ಕೂಡ ಚೀನಾದ 44ಕ್ಕೂ ಅಧಿಕ ಸೈನಿಕರು ಸಾವಿಗೀಡಾಗಿದ್ದಾರೆ ಎಂದು ಹೇಳಿತ್ತು.