Asianet Suvarna News Asianet Suvarna News

UP Elections 2022: ಉತ್ತರಪ್ರದೇಶದಲ್ಲಿ ಹಿಂದುತ್ವಕ್ಕೆ ಜೈ ಎಂದ ಓವೈಸಿ : 4 ಹಿಂದೂ ಅಭ್ಯರ್ಥಿಗಳಿಗೆ ಟಿಕೇಟ್!

*ಕಟ್ಟರ್‌ ಮುಸ್ಲಿಂ ಮೂಲಭೂತವಾದಿಯ ಅಚ್ಚರಿಯ ಹೆಜ್ಜೆ
*ಯುಪಿ ಅಖಾಡಕ್ಕೆ ಓವೈಸಿ ಎಂಟ್ರಿ: ಯಾರಿಗೆ ಲಾಭ, ನಷ್ಟ?
*ಉತ್ತರಪ್ರದೇಶದಲ್ಲಿ ಹಿಂದುತ್ವಕ್ಕೆ ಜೈ ಎಂದ  AIMIM

ಉತ್ತರ ಪ್ರದೇಶ(ಜ. 27): ಬಹುನಿರೀಕ್ಷಿತ ಉತ್ತರ ಪ್ರದೇಶ, ಪಂಜಾಬ್‌, ಉತ್ತರಾಖಂಡ, ಗೋವಾ ಮತ್ತು ಮಣಿಪುರ ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ ಘೋಷಣೆ ಬೆನ್ನಲ್ಲೇ ರಾಜಕೀಯ ಚಟುವಟಿಕೆ ಬಿರುಸು ಪಡೆದುಕೊಂಡಿದೆ . ಫೆ.10ರಿಂದ ಮಾ.7ರ ಅವಧಿಯಲ್ಲಿ ಹಲವು ಹಂತಗಳಲ್ಲಿ ಕೋವಿಡ್‌ ಮಾರ್ಗಸೂಚಿ ಪಾಲಿಸಿ ಚುನಾವಣೆ ನಡೆಯಲಿದೆ. ಮಾ.10ರಂದು ಈ ಎಲ್ಲಾ 5 ರಾಜ್ಯಗಳ ಫಲಿತಾಂಶ ಪ್ರಕಟವಾಗಲಿದೆ. ಈ ಮಧ್ಯೆ ಎಐಎಂಐಎಂ ನಾಯಕ ಅಸಾದುದ್ದೀನ್  ಓವೈಸಿ (Asaduddin Owaisi) ಈಗ ಉತ್ತರ ಪ್ರದೇಶ (Uttar Pradesh) ಚುನಾವಣಾ ಅಖಾಡಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಅಷ್ಟೇ ಅಲ್ಲದೇ ಕಟ್ಟರ್‌ ಮುಸ್ಲಿಂ ಮೂಲಭೂತವಾದಿಯಾದ ಓವೈಸಿ ಅಚ್ಚರಿಯ ಹೆಜ್ಜೆ ಇಟ್ಟಿದ್ದು ಚುನಾವಣೆಯಲ್ಲಿ ಹಿಂದುತ್ವಕ್ಕೆ ಜೈ ಎಂದಿದ್ದಾರೆ.

ಇದನ್ನೂ ಓದಿ: ಮೋದಿ ವಿರುದ್ಧ ಅಸಾದುದ್ದೀನ್ ವಾಗ್ದಾಳಿ: ಮುಸ್ಲಿಂ ಸಹೋದರಿಯರನ್ನು ಸಹೋದರಿಯರಂತೆ ಪರಿಗಣಿಸುವುದಿಲ್ಲ!

ಹೌದು! ಉತ್ರಪ್ರದೇಶದಲ್ಲಿ ಸ್ಪರ್ಧಿಸಿರುವ  ಎಐಎಂಐಎಂ (AIMIM)  ಪಕ್ಷದ 27 ಅಭ್ಯರ್ಥಿಗಳ ಪೈಕಿ ನಾಲ್ವರು ಹಿಂದೂಗಳಿಗೆ ಟಿಕೇಟ್‌ ನೀಡಲಾಗಿದೆ. ಸಹುಬದಾದ್‌ ಕ್ಷೇತ್ರದಿಂದ ಪಂಡಿತ್‌ ಮನೋಮೋಹನ್‌ ಜಾಹ್‌, ರಾಮನಗರ ಕ್ಷೇತ್ರದಿಂದ ವಿಕಾಸ್‌ ಶ್ರೀವಾಸ್ತವ್‌, ಬಧುನಾ ಕ್ಷೇತ್ರದಿಂದ ಭೀಮ್‌ ಸಿಂಗ್‌ ಬಲಿಯಾನ್‌ ಹಾಗೂ ಹಸ್ತಿನಾಪುರ್‌ ವಿಧಾನಸಭಾ ಕ್ಷೇತ್ರದಿಂದ ವಿನೋದ ಜಾಟವ್‌ಗೆ  ಎಐಎಂಐಎಂ ಟಿಕೇಟ್‌ ನೀಡಿದೆ.  ಓವೈಸಿ ನಡೆ ಯಾರಿಗೆ ಲಾಭ ಯಾರಿಗೆ ನಷ್ಟ ತರಲಿದೆ ಎಂದು ಕಾದುನೋಡಬೇಕೆದೆ. ಇಲ್ಲಿದೆ ಈ ಕುರಿತ ವರದಿ..!

Video Top Stories