Farm Laws| ಕೃಷಿ ಕಾಯ್ದೆ ರೈತರಿಗೆ ತಲುಪಿಸುವಲ್ಲಿ ಮೋದಿ ಸರ್ಕಾರ ಸೋತಿದ್ದೆಲ್ಲಿ?
ಕೃಷಿ ಕಾಯ್ದೆ ಹೋರಾಟ, ಹಿಂಸಾಚಾರ, ಇದೆಲ್ಲವನ್ನೂ ದೆಶ ಕಂಡಿದೆ. ಯಾವಾಗ ಕೃಷಿ ಕಾಯ್ದೆ ಜಾರಿಗೊಳಿಸುತ್ತೇವೆಂದು ಮೋದಿ ಸರ್ಕಾರ ಹೇಳಿತ್ತೋ ಅಲ್ಲಿಂದಲೇ ಆರಂಭವಾಗಿತ್ತು ಕೃಷಿ ಕಿಚ್ಚು. ಸುದೀರ್ಘ ಅವಧಿಯ ಈ ಹೋರಾಟಕ್ಕೆ ಮೋದಿ ಸದ್ಯ ಪೂರ್ಣ ವಿರಾಮ ಇಟ್ಟಿದ್ದಾರೆ. ರೈತನ ಆಕ್ರೋಶಕ್ಕೆ ಮಣಿದ ಮೋದಿ ಸರ್ಕಾರ ಈ ಕಾಯ್ದೆಯನ್ನು ಹಿಂಪಡೆಯುವುದಾಗಿ ಹೇಳಿದೆ. ಇದೊಂದು ಕಾರ್ಯ ರೈತರಿಗೆ ತಲುಪಿಸುವಲ್ಲಿ ಮೋದಿ ಎಡವಿದ್ರಾ? ಈ ಹೋರಾಟದಲ್ಲಿ ಗೆಲುವಾಗಿದ್ದು ಯಾರಿಗೆ?
ನವದೆಹಲಿ(ನ.20): ಕೃಷಿ ಕಾಯ್ದೆ ಹೋರಾಟ, ಹಿಂಸಾಚಾರ, ಇದೆಲ್ಲವನ್ನೂ ದೆಶ ಕಂಡಿದೆ. ಯಾವಾಗ ಕೃಷಿ ಕಾಯ್ದೆ ಜಾರಿಗೊಳಿಸುತ್ತೇವೆಂದು ಮೋದಿ ಸರ್ಕಾರ ಹೇಳಿತ್ತೋ ಅಲ್ಲಿಂದಲೇ ಆರಂಭವಾಗಿತ್ತು ಕೃಷಿ ಕಿಚ್ಚು. ಸುದೀರ್ಘ ಅವಧಿಯ ಈ ಹೋರಾಟಕ್ಕೆ ಮೋದಿ ಸದ್ಯ ಪೂರ್ಣ ವಿರಾಮ ಇಟ್ಟಿದ್ದಾರೆ. ರೈತನ ಆಕ್ರೋಶಕ್ಕೆ ಮಣಿದ ಮೋದಿ ಸರ್ಕಾರ ಈ ಕಾಯ್ದೆಯನ್ನು ಹಿಂಪಡೆಯುವುದಾಗಿ ಹೇಳಿದೆ. ಇದೊಂದು ಕಾರ್ಯ ರೈತರಿಗೆ ತಲುಪಿಸುವಲ್ಲಿ ಮೋದಿ ಎಡವಿದ್ರಾ? ಈ ಹೋರಾಟದಲ್ಲಿ ಗೆಲುವಾಗಿದ್ದು ಯಾರಿಗೆ?
ಮಹತ್ವದ ಬೆಳವಣಿಗೆಯೊಂದರಲ್ಲಿ, ದೆಹಲಿಯ ಗಡಿ ಹಾಗೂ ವಿವಿಧ ರಾಜ್ಯಗಳಲ್ಲಿ ಒಂದು ವರ್ಷದಿಂದ ರೈತರ ಪ್ರತಿಭಟನೆಗೆ ಕಾರಣವಾಗಿದ್ದ ಕೇಂದ್ರ ಸರ್ಕಾರದ ಮೂರು ವಿವಾದಿತ ಕೃಷಿ ಕಾಯ್ದೆಗಳನ್ನು ಹಿಂಪಡೆಯುವುದಾಗಿ ಪ್ರಧಾನಿ ನರೇಂದ್ರ ಮೋದಿ ಪ್ರಕಟಿಸಿದ್ದಾರೆ.
ಹೆಚ್ಚಾಗಿ ಸಿಖ್ ರೈತರಿಂದಲೇ ಆಕ್ರೋಶಕ್ಕೆ ಗುರಿಯಾಗಿದ್ದ ಈ ಕಾಯ್ದೆಗಳನ್ನು ಸಿಖ್ ಧರ್ಮ ಸಂಸ್ಥಾಪಕ ಗುರುನಾನಕ್ ಅವರ ಹುಟ್ಟುಹಬ್ಬದ ದಿನವೇ ಹಿಂಡೆಯುವುದಾಗಿ ಘೋಷಿಸಿರುವ ಅವರು, ‘ಚಳಿಗಾಲದ ಸಂಸತ್ ಅಧಿವೇಶನದಲ್ಲಿ (ನ.29ರಿಂದ ಆರಂಭ) ಕಾಯ್ದೆ ರದ್ದತಿ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು. ಪ್ರತಿಭಟನೆ ನಡೆಸುತ್ತಿರುವ ರೈತ ಬಾಂಧವರೆಲ್ಲ ಮನೆಗೆ ಮರಳಬೇಕು’ ಎಂದು ಮನವಿ ಮಾಡಿದ್ದಾರೆ. ಈ ಕುರಿತಾದ ಮತ್ತಷ್ಟು ವಿವರ