Asianet Suvarna News Asianet Suvarna News

ದೇವರನಾಡಿನಲ್ಲಿ ಮತ್ತೆ ಕೊರೋನಾ ಭೀತಿ, ವೈರಸ್‌ ಹಬ್ಬಲು ಆ ಮೂರು ವಿಚಾರ ಕಾರಣ!

Jul 30, 2021, 6:11 PM IST

ತಿರುವನಂತಪುರಂ(ಜು.30):ಮತ್ತೆ ಭುಗಿಲೆದ್ದಿದೆ ಕೊರೋನಾ ಭೂತ. ದೇಶದಲ್ಲಿ ಒಂದೇ ದಿನ ಪತ್ತೆಯಾಗಿದ್ದು ಬರೋಬ್ಬರಿ 43,000 ಹೊಸ ಕೇಸ್. ಅದರಲ್ಲಿ ಅರ್ಧಕ್ಕರ್ಧ ಪಾಲು ಕೇರಳದ್ದು. ಕರ್ನಾಟಕದ ಪಕ್ಕದಲ್ಲೇ ಇದೆ ಅಗ್ನಿಗೋಳ. ಹಾಗಾದ್ರೆ ದೇಶಕ್ಕೆ ಮತ್ತೆ ಕಂಟಕವಾಗುತ್ತಾ ಕೊರೋನಾ? ಕೇರಳದಲ್ಲಿ ಕೊರೋನಾ ಅಟ್ಟಹಾಸಕ್ಕೆ ಇದೆಯಂತೆ ಮೂರು ಮುಖ್ಯ ಕಾರಣ? ಹಾಗಾದ್ರೆ ದೇವರನಾಡಿನಿಂದಲೇ ವಕ್ಕರಿಸುತ್ತಾ ಮೂರನೇ ರಕ್ಕಸ ಅಲೆ?

ಹೌದು ಇಷ್ಟು ದಿನ ಅಡ್ಡಾಡಿದ್ದು ಎಲ್ಲಾ ಸಾಕು. ಇನ್ಮುಂದೆ ಸುಮ್‌ ಸುಮ್ನೆ ಪ್ರವಾಸಕ್ಕೆ ಸಾಧ್ಯವಾದಷ್ಟು ತಡೆ ಹಿಡಿಯಲು ಪ್ರಯತ್ನಿಸಿ. ಯಾಕೆಂದರೆ ದೇಶದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದ್ದು ಮತ್ತೆ ವೈರಸ್‌ ನರ್ತನ ಆರಂಭವಾಗುವ ಸೂಚನೆ ಲಭಿಸಿದೆ.