Asianet Suvarna News Asianet Suvarna News

ಕೃತಕ ಚಂದ್ರನ ಸೃಷ್ಟಿಸಿ ಪರೀಕ್ಷೆ ನಡೆಸಿತ್ತು ಇಸ್ರೋ, ಚಂದ್ರಯಾನ 3 ಪ್ರಾಜೆಕ್ಟ್‌ ಡೈರೆಕ್ಟರ್‌ ಜೊತೆ ಸಂದರ್ಶನ!

ಚಂದ್ರಯಾನ 2 ವೈಫಲ್ಯದ ಬಳಿಕ ಸತತ 4 ವರ್ಷ ಸಂಶೋಧನೆ, ಪ್ರಯೋಗ, ಪರೀಕ್ಷೆ ನಡೆಸಿದ ಇಸ್ರೋ, ಯಶಸ್ವಿಯಾಗಿ ಚಂದ್ರಯಾ3 ನಿರ್ವಹಿಸಿದೆ. ಇದರ ಹಿಂದಿನ ಪರಿಶ್ರಮ, ಎದುರಾದ ಸವಾಲು ಕುರಿತು ಚಂದ್ರಯಾನ 3 ಪ್ರಾಜೆಕ್ಟ್‌ ಡೈರೆಕ್ಟರ್‌ ಪಿ. ವೀರಮುತ್ತುವೇಲ್‌ ಜೊತೆಗಿನ ವಿಶೇಷ ಸಂದರ್ಶನ ಇಲ್ಲಿದೆ

First Published Sep 17, 2023, 4:25 PM IST | Last Updated Sep 17, 2023, 4:25 PM IST

ಚಂದ್ರನ ಮೇಲೆ ವಿಕ್ರಮ್ ಲ್ಯಾಂಡರ್ ಇಳಿಸಿ ಅಧ್ಯಯನ ನಡೆಸಿದ ಇಸ್ರೋ ಹೊಸ ದಾಖಲೆ ಬರೆದಿದೆ. ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿದ ಮೊದಲ ದೇಶ ಭಾರತ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. ಚಂದ್ರಯಾನ 3 ಯಶಸ್ಸು ಸುಲಭವಾಗಿ ಬಂದಿಲ್ಲ. ಇದಕ್ಕಾಗಿ ಕಳದ 4 ವರ್ಷ ಸತತ ಪರಿಶ್ರಮ ವಹಿಸಲಾಗಿತ್ತು. ಭೂಮಿ ಮೇಲೆ ಕೃತಕ ಚಂದ್ರನ ಸೃಷ್ಟಿಸಲಾಗಿತ್ತು. ಅಲ್ಲಿನ ವಾತಾವರಣ, ತಾಪಮಾನ ಸೇರಿದಂತೆ ಸೂಕ್ಷ್ಮ ವಿಚಾರಗಳನ್ನು ಸೃಷ್ಟಿಸಿ ಪ್ರಯೋಗ ನಡೆಸಲಾಗಿತ್ತು. ಸತತ 4 ವರ್ಷದ ಪರಿಶ್ರಮದ ಬಳಿಕ ಇಸ್ರೋ ಯಶಸ್ವಿಯಾಗಿ ಚಂದ್ರನ ಮೇಲೆ ಕಾಲಿಟ್ಟಿತು. ಚಂದ್ರಯಾನ 3ರಲ್ಲಿ ಎದುರಾದ ಸವಾಲು, ಚಂದ್ರಯಾನದ ಪಯಣದ ಕುರಿತು ಚಂದ್ರಯಾನ 3 ಪ್ರಾಜೆಕ್ಟ್‌ ಡೈರೆಕ್ಟರ್‌ ಪಿ. ವೀರಮುತ್ತುವೇಲ್‌ ಜೊತೆ ಏಷ್ಯಾನೆಟ್ ನ್ಯೂಸ್ ನಡೆಸಿದ ವಿಶೇಷ ಸಂದರ್ಶನ ಇಲ್ಲಿದೆ.