News Hour: ಅಯೋಧ್ಯೆಯಲ್ಲಿ ಇರ್ತಾನೆ ಕರ್ನಾಟಕದ ಶ್ರೀರಾಮ!

ಕನ್ನಡಿಗ ಕೆತ್ತಿದ ಮೂರ್ತಿಯೇ ಅಯೋಧ್ಯೆಗೆ ಫೈನಲ್ ಆಗುವ ಸಾಧ್ಯತೆ ಇದೆ. ಶಿಲ್ಪಿ ಅರುಣ್ ಕೈಯಲ್ಲಿ ಮೂಡಿದ  ವಿಗ್ರಹ ಹಿಂದೂಗಳ ಆರಾಧ್ಯ ದೈವವಾಗಲಿದ್ದು, ಈ ಬಗ್ಗೆ ಟ್ರಸ್ಟ್ ನಿಂದ ಅಧಿಕೃತ ಘೋಷಣೆಯೊಂದೇ ಬಾಕಿ ಉಳಿದಿದೆ.
 

First Published Jan 1, 2024, 11:51 PM IST | Last Updated Jan 1, 2024, 11:51 PM IST

ಬೆಂಗಳೂರು (ಜ.1): ಕನ್ನಡಿಗ ಕೆತ್ತಿದ ಮೂರ್ತಿ ಇನ್ಮುಂದೆ ಹಿಂದೂಗಳ ಆರಾಧ್ಯ ದೈವವಾಗಲಿದೆ. ಮೂಲಗಳ ಪ್ರಕಾರ ಅಯೋಧ್ಯೆ ರಾಮಮಂದಿರಕ್ಕೆ ಕನ್ನಡಿಗ ಅರುಣ್‌ ಯೋಗಿರಾಜ್‌ ಕೆತ್ತಿದ ಮೂರ್ತಿ ಆಯ್ಕೆಯಾಗಿದೆ ಎಂದು ವರದಿಯಾಗಿದೆ. ಅದರೊಂದಿಗೆ ವಿಶ್ವವೇ ಎದುರು ನೋಡುತ್ತಿರುವ ಅಯೋಧ್ಯೆ ರಾಮಮಂದಿರದಲ್ಲಿ ಕರ್ನಾಟಕದ ರಾಮ ಇರಲಿದ್ದಾನೆ.

ಜನವರಿ 22ರಂದು ಶ್ರೀರಾಮ ಮೂರ್ತಿಗೆ ಪ್ರಾಣ ಪ್ರತಿಷ್ಠಾಪನೆ ನಡೆಯಲಿದೆ. ಮೈಸೂರಿನ ಅರುಣ್ ಯೋಗಿರಾಜ್ ಕೆತ್ತಿದ ಮೂರ್ತಿ ಪ್ರಾಣ ಪ್ರತಿಷ್ಠಾಪನೆಗೆ ಆಯ್ಕೆಯಾಗಿದೆ ಎನ್ನುವ ಸುದ್ದಿ ಹಬ್ಬುತ್ತಿದ್ದಂತೆ ಶಿಲ್ಪಿ ಅರುಣ್ ಅವರ ಮೈಸೂರಿನ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ.

ಅಯೋಧ್ಯೆ ರಾಮನ ವಿಗ್ರಹ ಜನವರಿ ಮೊದಲ ವಾರದಲ್ಲಿ ಅಂತಿಮ: ಆಯ್ಕೆಯಾಗುತ್ತಾ ಕನ್ನಡಿಗರು ಕೆತ್ತಿರೋ ವಿಗ್ರಹ?

ಶಿಲ್ಪಿ ಅರುಣ್ ಕೆತ್ತಿದ ಮೂರ್ತಿ ಬಗ್ಗೆ ಕುಟುಂಬಸ್ಥರು ಮಾಹಿತಿ ಹಂಚಿಕೊಂಡಿದ್ದಾರೆ. ಸುವರ್ಣ ನ್ಯೂಸ್ ಜೊತೆ ಸಂತಸ ಅವರ ಕುಟುಂಬಸ್ಥರು ಸಂತಸ ಹಂಚಿಕೊಂಡಿದ್ದಾರೆ. ಮೂರ್ತಿ ಆಯ್ಕೆಯ ಬಗ್ಗೆ ಸಹೋದರ, ಅರುಣ್ ಪತ್ನಿ  ಸಂತಸ ವ್ಯಕ್ತಪಡಿಸಿದ್ದಾರೆ.