Farm law Withdrawn : ಅನ್ನದಾತರ ಮುಂದೆ ಅಹಂಕಾರ ತಲೆ ತಗ್ಗಿಸಿದೆ, ರಾಹುಲ್ ಗಾಂಧಿ
ಪಂಜಾಬ್, ಉತ್ತರ ಪ್ರದೇಶ ಚುನಾವಣೆ ಹಿನ್ನಲೆ 3 ವಿವಾದಿತ ಕೃಷಿ ಕಾಯ್ದೆಯನ್ನು ಕೇಂದ್ರ ಸರ್ಕಾರ ವಾಪಸ್ ಪಡೆದಿದೆ. ಪ್ರಧಾನಿ ಮೋದಿ ಮಹತ್ವದ ಘೋಷಣೆ ಮಾಡಿದ್ದಾರೆ.
ಬೆಂಗಳೂರು (ನ. 19): ಪಂಜಾಬ್, ಉತ್ತರ ಪ್ರದೇಶ ಚುನಾವಣೆ ಹಿನ್ನಲೆ 3 ವಿವಾದಿತ ಕೃಷಿ ಕಾಯ್ದೆಯನ್ನು (Farm Laws Repealing) ಕೇಂದ್ರ ಸರ್ಕಾರ ವಾಪಸ್ ಪಡೆದಿದೆ. ಪ್ರಧಾನಿ ಮೋದಿ (PM Modi) ಮಹತ್ವದ ಘೋಷಣೆ ಮಾಡಿದ್ದಾರೆ. ಕೇಂದ್ರದ ಈ ನಿರ್ಧಾರ ಅಚ್ಚರಿ ಮೂಡಿಸಿದೆ. ಈ ನಿರ್ಧಾರವನ್ನು ರೈತರು ಸ್ವಾಗತಿಸಿದರೆ, ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವಿವಾದಿತ 3 ಕೃಷಿ ಕಾಯ್ದೆ ವಾಪಸ್: ಕೇಂದ್ರದ ನಿರ್ಧಾರವನ್ನು ಸಿಎಂ ಬೊಮ್ಮಾಯಿ ಸಮರ್ಥಿಸಿದ್ಹೀಗೆ
ಕೃಷಿ ಕಾಯ್ದೆ ವಿರುದ್ಧ ರಾಹುಲ್ ಗಾಂಧಿ (Rahul Gandhi) ಪ್ರಬಲವಾಗಿ ಧ್ವನಿ ಎತ್ತಿದ್ದರು. ರೈತ ಹೋರಾಟದಲ್ಲಿಯೂ ಭಾಗಿಯಾಗಿದ್ದರು. 'ನನ್ನ ಮಾತನ್ನು ಬರೆದಿಟ್ಟುಕೊಳ್ಳಿ. ಸರ್ಕಾರ ರೈತ ವಿರೋಧಿ ಕೃಷಿ ಕಾಯ್ದೆಯನ್ನು ಹಿಂಪಡೆಯುತ್ತದೆ' ಎಂದು ಜನವರಿ 14 ರಂದು ಟ್ವೀಟ್ ಮಾಡಿದ್ರು. ಆ ಟ್ವೀಟನ್ನು ಇಂದು ಪುನರುಚ್ಚರಿಸಿದ್ದಾರೆ. 'ದೇಶದ ಅನ್ನದಾತ ಸತ್ಯಾಗ್ರಹದ ಮೂಲಕ ಅಹಂಕಾರದ ತಲೆ ಬಗ್ಗಿಸಿದ್ದಾರೆ. ಜೈ ಹಿಂದ್, ಭಾರತದ ಕೃಷಿಕನಿಗೆ ಜಯವಾಗಲಿ' ಎಂದು ಕೇಂದ್ರದ ನಿರ್ಧಾರವನ್ನು ಸ್ವಾಗತಿಸಿದ್ದಾರೆ.