ನವರಾತ್ರಿಗೆ 8 ಕೋಟಿ ರೂಪಾಯಿ ನೋಟು ಹಾಗೂ ಚಿನ್ನಾಭರಣದಿಂದ ಕಂಗೊಳಿಸಿದ 135 ವರ್ಷ ಹಳೆ ದೇಗುಲ!

ನವರಾತ್ರಿ ಹಬ್ಬಕ್ಕೆ ದೇವಸ್ಥಾನಗಳು ಸಿಂಗಾರಗೊಳ್ಳುತ್ತದೆ. ವಿಶೇಷ ಪೂಜೆಗಳು ನಡೆಯುತ್ತದೆ. ಇದೇ ನವರಾತ್ರಿ ಹಬ್ಬದ ಪ್ರಯುಕ್ತ 135 ವರ್ಷ ಹಳೇ ವಾಸವಿ ಕನ್ಯಾಕ ಪರಮೇಶ್ವರಿ ದೇಗುಲದ ಸಿಂಗಾರ ಇಡೀ ಭಾರತದಲ್ಲೇ ಮನೆ ಮಾತಾಗಿದೆ. 

Share this Video
  • FB
  • Linkdin
  • Whatsapp

ಆಂಧ್ರ ಪ್ರದೇಶ(ಅ.04): ವಾಸವಿ ಕನ್ಯಕ ಪರಮೇಶ್ವರಿ ದೇಗುಲವನ್ನು ಬರೋಬ್ಬರಿ 8 ಕೋಟಿ ರೂಪಾಯಿ ನಗದು ಹಣ ಹಾಗೂ ಚಿನ್ನಾಭರಣದ ಮೂಲಕ ಅಲಂಕಾರಗೊಳಿಸಲಾಗಿದೆ. ನವರಾತ್ರಿ ಹಬ್ಬದ ಪ್ರಯುಕ್ತ ದೇಗುಲ ಸಿಂಗಾರಗೊಂಡಿದೆ. ಆಂಧ್ರ ಪ್ರದೇಶದ 135 ವರ್ಷ ಹಳೇ ವಾಸವಿ ಕನ್ಯಕ ಪರಮೇಶ್ವರಿ ದೇಗುಲ ಇದೀಗ ಭಾರತದಲ್ಲೇ ಸದ್ದು ಮಾಡುತ್ತಿದೆ. ದೇಗುಲದ ಗೋಡೆ ಸಂಪೂರ್ಣವಾಗಿ ನೋಟುಗಳಿಂದ ಅಲಂಕರಿಸಲಾಗಿದೆ. ದೇಗುಲದ ನೆಲಭಾಗವವನ್ನು ಚಿನ್ನಾಭರಣಗಳಿಂದ ಅಲಂಕಾರಗೊಳಿಸಲಾಗಿದೆ. ಭಕ್ತರು ನೀಡಿರುವ ಹಣದಿಂದಲೇ ಈ ಅಲಂಕಾರ ಮಾಡಲಾಗಿದೆ.

Related Video