ಫಲ ಕೊಡ್ತು ಆಂಧ್ರ ಪೊಲೀಸರ ಕಾರ್ಯಾಚರಣೆ; ಕುಖ್ಯಾತ ಸೈನೈಡ್ ಕಿಲ್ಲರ್ ಅರೆಸ್ಟ್

ಆಂಧ್ರ ಪ್ರದೇಶದ ಮೂರು ಜಿಲ್ಲೆಗಳ ಮೂವರು ಮಹಿಳೆಯರು ಸೇರಿ 10 ಮಂದಿಯನ್ನು 20 ತಿಂಗಳ ಅವಧಿಯಲ್ಲಿ ಸೈನೈಡ್ ನೀಡಿ ಕೊಂದ ಆರೋಪದ ಮೇಲೆ 38 ವರ್ಷದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಇದೆ ಕೊಲೆಗೆ ಸೈನೈಡ್ ಪೂರೈಸಿದ ಆರೋಪಕ್ಕೆ ಸಂಬಂಧಿಸಿದಂತೆ ವಿಜಯವಾಡದ ಶೇಕ್ ಅಮೀನುಲ್ಲಾ ಬಾಬು ಅಲಿಯಾಸ್ ಬಾಬು ಎಂಬಾತನನ್ನೂ ಪೊಲೀಸರು ಬಂಧಿಸಿದ್ದಾರೆ.

First Published Nov 6, 2019, 7:01 PM IST | Last Updated Nov 6, 2019, 7:03 PM IST

ವಿಶಾಖಪಟ್ಟಣ (ನ.06): ಆಂಧ್ರ ಪ್ರದೇಶದ ಮೂರು ಜಿಲ್ಲೆಗಳ ಮೂವರು ಮಹಿಳೆಯರು ಸೇರಿ 10 ಮಂದಿಯನ್ನು 20 ತಿಂಗಳ ಅವಧಿಯಲ್ಲಿ ಸೈನೈಡ್ ನೀಡಿ ಕೊಂದ ಆರೋಪದ ಮೇಲೆ 38 ವರ್ಷದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಇದೆ ಕೊಲೆಗೆ ಸೈನೈಡ್ ಪೂರೈಸಿದ ಆರೋಪಕ್ಕೆ ಸಂಬಂಧಿಸಿದಂತೆ ವಿಜಯವಾಡದ ಶೇಕ್ ಅಮೀನುಲ್ಲಾ ಬಾಬು ಅಲಿಯಾಸ್ ಬಾಬು ಎಂಬಾತನನ್ನೂ ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ನೋಡಿ | ಪೆಟ್ರೋಲ್ ಕಳ್ಳರ ಕೈಚಳಕ CCTVಯಲ್ಲಿ ಸೆರೆ; ಖದೀಮರಿಗೆ ನಿಮ್ಮ ಗಾಡಿಯಲ್ಲ ಬೇರೆ!...

ಮ್ಯಾಜಿಕ್ ಕಲ್ಲುಗಳನ್ನು ಬಳಸಿ ನಗದು ಹಾಗೂ ಆಭರಣಗಳನ್ನು ದ್ವಿಗುಣಗೊಳಿಸುವ ಭರವಸೆ ನೀಡಿ, ಸಿಂಹಾದ್ರಿ ಜನರನ್ನು ಮರಳು ಮಾಡುತ್ತಿದ್ದ. ನಂಬಿದ ಮಂದಿಯನ್ನು ಅಜ್ಞಾತ ಸ್ಥಳಕ್ಕೆ ಕರೆದೊಯ್ದು, ಕೆಲವು ಪೂಜೆಗಳನ್ನು ಮಾಡಿಸುತ್ತಿದ್ದ. ಅಲ್ಲಿ ನಿಧಿ ಇದೆ ಎಂದೂ ಮುಗ್ಧರನ್ನು ನಂಬಿಸುತ್ತಿದ್ದ. ಇರೋ ಸಂಪತ್ತನ್ನು ಹೆಚ್ಚಿಸಿಕೊಳ್ಳುವ ಹುಚ್ಚಿನಲ್ಲಿ ಜನರು ಸಿಂಹಾದ್ರಿಯನ್ನು ಹಿಂದು ಮುಂದೆ ನೋಡದೆ ನಂಬುತ್ತಿದ್ದರು.

ಔಷಧಿ ಇದೆ ಎಂದು ಹೇಳಿ ಜನರಿಗೆ ಪ್ರಸಾದ ನೀಡುವ ನೆಪದಲ್ಲಿ ಸೈನೈಡ್ ನೀಡುತ್ತಿದ್ದ. ಕಣ್ಣು ಮುಚ್ಚಿ ಬಿಡುವುದರಲ್ಲಿ ಜನರು ಮೃತಪಡುತ್ತಿದ್ದರು. ಈತ ನಗದು, ಆಭರಣಗಳೊಂದಿಗೆ ಪರಾರಿಯಾಗುತ್ತಿದ್ದ.