Video ಲೋಕಸಭಾ ಚುನಾವಣಾ ಪ್ರಚಾರಕ್ಕೆ ಅಮಿತ್ ಶಾ ಏ.2ಕ್ಕೆ ಕರ್ನಾಟಕ್ಕೆ ಎಂಟ್ರಿ, ರೋಡ್ ಶೋ!

ಚೆನ್ನಪಟ್ಟಣದಲ್ಲಿ ಅಮಿತ್ ಶೋ ರೋಡ್-ಬಹಿರಂಗ ಸಮಾವೇಶ ಆಯೋಜನೆ, ಮಂಡ್ಯ ಬಿಡಲ್ಲ, ಎಪ್ರಿಲ್ 3ಕ್ಕೆ ಅಂತಿಮ ನಿರ್ಧಾರ ಘೋಷಿಸಲಿದ್ದಾರೆ ಸುಮಲತಾ,ಕುಮಾರಸ್ವಾಮಿ ಹಾರ್ಟ್ ಆಪರೇಶನ್ ಅನುಮಾನ, ಕೈ ಶಾಸಕನ ವ್ಯಂಗ್ಯ, ಕೆವಿ ಗೌತಮ್‌ಗೆ ಟಿಕೆಟ್ ಕೊಟ್ಟು ಕೋಲಾರ ಬಂಡಾಯ ಶಮನ ಮಾಡಿತಾ ಕಾಂಗ್ರೆಸ್? ಸೇರಿದಂತೆ ಇಂದಿನ ಇಡೀ ದಿನದ ಪ್ರಮುಖ ಸುದ್ದಿಯ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.
 

Share this Video
  • FB
  • Linkdin
  • Whatsapp

ಕರ್ನಾಟಕದಲ್ಲಿ ಲೋಕಸಭಾ ಚುನಾವಣಾ ಪ್ರಚಾರ ಕಾರ್ಯಕ್ರಮಕ್ಕೆ ಅಮಿತ್ ಶಾ ಎಂಟ್ರಿಕೊಡುತ್ತಿದ್ದಾರೆ. ಏಪ್ರಿಲ್ 2ರಂದು ಅಮಿತ್ ಶಾ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. 5 ಕ್ಷೇತ್ರಗಳ ಕುರಿತು ಅಮಿತ್ ಶಾ ಬೆಂಗಳೂರಿನ ಅರಮನೆ ಮೈದಾನದಲ್ಲಿ ಮಹತ್ವದ ಸಭೆ ನಡೆಸಲಿದ್ದಾರೆ. ಪ್ರಮುಖ ಲೋಕಸಭಾ ಕ್ಷೇತ್ರಗಳಾಗ ದಾವಗಣೆರೆ, ಚಿತ್ರದುರ್ಗ, ತುಮಕೂರ ಹಾಗೂ ಚಿಕ್ಕಬಳ್ಳಾಪುರ ಮುಖಂಡರ ಜೊತೆಗೂ ಅಮಿತ್ ಶಾ ಸಭೆ ನಡೆಸಲಿದ್ದಾರೆ. ಇದಾದ ಬಳಿಕ ಅಮಿತ್ ಶಾ ಚೆನ್ನಪಟ್ಟಣಕ್ಕೆ ಆಗಮಿಸಿ ರೋಡ್ ಶೋನಲ್ಲಿ ಪಾಲ್ಗೊಳ್ಳಲಿದ್ದಾರೆ. 2024ರ ಚುನಾವಣೆಯ ಮೊದಲ ಬಹಿರಂಗ ಸಭೆ ಚೆನ್ನಪಟ್ಟಣದಲ್ಲಿ ನಡೆಸಲಿದ್ದಾರೆ. ಅಮಿತ್ ಶಾ ಸಂಪೂರ್ಣ ವೇಳಾಪಟ್ಟಿ ಸೇರಿದಂತೆ ಇಂದಿನ ಇಡೀ ದಿನದ ಪ್ರಮುಖ ಸುದ್ದಿಯ ವಿಡಿಯೋ ಇಲ್ಲಿದೆ.

Related Video