ಬ್ರಿಟೀಷರು ತಂದ ಕ್ರಿಮಿನಲ್ ಕಾನೂನು ಕಿತ್ತು ಹಾಕಿದ ಕೇಂದ್ರ ಸರ್ಕಾರ, ಹೊಸ ಕಾಯ್ದೆ ಮಂಡನೆ!
ಬ್ರಿಟೀಷರು ತಂದ ಕಾನೂನು ತೆಗೆದು ಹೊಸ ಕ್ರಿಮಿನಲ್ ಕಾನೂನು ಮಂಡಿಸಿದ ಶಾ,ಲೋಕಸಭಾ ಚುನಾವಣೆಗೆ ರಣತಂತ್ರ, ಆಪರೇಶನ್ ಹಸ್ತ ಶುರು, ಕಮಿಷನ್ ಆರೋಪದ ಬೆನ್ನಲ್ಲೇ ಬಿಬಿಎಂಪಿ ಕಚೇರಿಗೆ ಬೆಂಕಿ, ದಾಖಲೆ ನಾಶ ಸೇರಿದಂತೆ ಇಂದಿನ ಇಡೀ ದಿನದ ಪ್ರಮುಖ ಸುದ್ದಿಯ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.
ಬ್ರಿಟಿಷರ ಆಳ್ವಿಕೆಯಲ್ಲಿ ರಚನೆಯಾಗಿದ್ದ ಮೂರು ಪ್ರಮುಖ ಕಾಯ್ದೆಗಳನ್ನು ಕೇಂದ್ರ ಸರ್ಕಾರ ಕಿತ್ತು ಹಾಕಿದೆ. ಈ ಮೂಲಕ ಬ್ರಿಟಿಷರ ವಸಾಹತು ಶಾಹಿಯಿಂದ ಸಂಪೂರ್ಣವಾಗಿ ಹೊರಬರಲು ಕೇಂದ್ರ ಬಿಜೆಪಿ ಹೊಸ ಕಾಯ್ದೆಗಳನ್ನು ಇಂದು ಲೋಕಸಭೆಯಲ್ಲಿ ಮಂಡಿಸಿದೆ. ಬ್ರಿಟಿಷರ್ 1880ರ ಅವಧಿಯಲ್ಲಿ ತಂದ ಭಾತೀಯ ದಂಡ ಸಂಹಿತ, ಭಾರತ ಸಾಕ್ಷ್ಯ ಕಾಯಿದೆ, ಅಪರಾಧ ಪ್ರಕ್ರಿಯೆ ಸಂಹಿತೆ ಮೂರು ಪ್ರಮುಖ ಸಂಹಿತೆಗಳನ್ನು ಬ್ರಿಟಿಷ್ ಸಂಸತ್ತಿನಲ್ಲಿ ಅಂಗೀಕಾರ ಪಡೆದು ಭಾರತದಲ್ಲಿ ಜಾರಿ ಮಾಡಲಾಗಿತ್ತು. 1880ರಿಂದ ಇಲ್ಲೀವರೆಗೆ ಇದೇ ಕಾನೂನು ಭಾರತದಲ್ಲಿದೆ. ಬ್ರಿಟಿಷರು ತಮ್ಮ ಆಡಳಿತ, ತಮ್ಮ ವಿರುದ್ದ ಪ್ರತಿಭಟನೆ ಏಳುವ ಹೋರಾಟಗಾರರನ್ನು ಹತ್ತಿಕ್ಕಲು ತಂದ ಕಾನೂನಿನಲ್ಲೇ ಭಾರತ ಇಷ್ಟು ದಿನ ಸಾಗಿದೆ. ಇದೀಗ ಈ ಕಾಯ್ದೆಗಳನ್ನು ತೆಗೆದು ಹಾಕಿದ ಕೇಂದ್ರ ಸರ್ಕಾರ ಹೊಸ ಕಾಯ್ದೆ ಲೋಕಸಭೆಯಲ್ಲಿ ಮಂಡಿಸಿದೆ.