UP Politics ಉತ್ತರ ಪ್ರದೇಶದಲ್ಲಿ ಸಂಚಲನ ಹುಟ್ಟು ಹಾಕಿದ ಅಮಿತ್ ಶಾ ಹೇಳಿಕೆ
ಫೆಬ್ರವರಿ 23 ರಂದು ಯುಪಿ ವಿಧಾನಸಭಾ ಚುನಾವಣೆಯಲ್ಲಿ ನಾಲ್ಕನೇ ಹಂತದ ಮತದಾನ ಪೂರ್ಣಗೊಂಡಿದೆ. ಎಲ್ಲಾ ರಾಜಕೀಯ ಪಕ್ಷಗಳು ಮುಂದಿನ ಹಂತಗಳಿಗೆ ಸಂಪೂರ್ಣವಾಗಿ ಸಿದ್ಧತೆ ನಡೆಸಿವೆ. ಹೀಗಿರುವಾಗ ಬಿಎಸ್‌ಪಿ ಅಧ್ಯಕ್ಷೆ ಮಾಯಾವತಿ ಅವರು 2007 ರಂತೆ ಸಂಪೂರ್ಣ ಬಹುಮತದೊಂದಿಗೆ ಸರ್ಕಾರ ರಚಿಸುವ ಸಾಧನೆಗೆ ಮರಳಿ ಯತ್ನಿಸುತ್ತೇವೆ. ಈ ಮೂಲಕ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರ ಸರ್ಕಾರ ರಚಿಸುವ ಎಲ್ಲಾ ಕನಸುಗಳು ನುಚ್ಚು ನೂರಾಗಿಸುತ್ತವೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ. ಇದೇ ಸಂದರ್ಭದಲ್ಲಿ, ಬಿಎಸ್ಪಿ ಅಧ್ಯಕ್ಷೆ ಮಾಯಾವತಿ ಹಾಗೂ ಬಿಎಸ್‌ಪಿಯ ಪ್ರಸ್ತುತತೆ ಹಾಗೇ ಉಳಿಯಬೇಕು ಎಂದು ಅಮಿತ್ ಶಾ ಸಂದರ್ಶನವೊಂದರಲ್ಲಿ ಹೇಳಿರೋದು ಚರ್ಚೆ ಹುಟ್ಟುಹಾಕಿದೆ. ಪ್ರತಿಯಾಗಿ, ಅಮಿತ್ ಶಾ ಸತ್ಯ ಒಪ್ಪಿಕೊಂಡಿರುವುದು ಅವರ ದೊಡ್ಡತನ ಎಂದು ಮಾಯಾವತಿ ಹೊಗಳಿದ್ದಾರೆ.

ಬಿಜೆಪಿ-ಬಿಎಸ್‌ಪಿಯ ಚುನಾವಣೋತ್ತರ ಮೈತ್ರಿ ಗೊಂದಲ, ಮಹತ್ವದ ಕರೆ ಕೊಟ್ಟ ಮಾಯಾವತಿ
ಮಾಯಾವತಿ ಅವರು ಮತ ಚಲಾಯಿಸಿದ ನಂತರ ಸಾಮಾಜಿಕ ಮಾಧ್ಯಮ ಟ್ವಿಟರ್ ಹ್ಯಾಂಡಲ್‌ನಿಂದ ಪತ್ರಿಕಾ ಪ್ರಕಟಣೆಯನ್ನು ಶೇರ್ ಮಾಡಿಕೊಂಡಿದ್ದಾರೆ. ಈ ನಡುವೆ ಮಾಧ್ಯಮದವರೊಂದಿಗೆ ಸಂವಾದ ಕೂಡಾ ನಡೆಸಿದ್ದಾರೆ. ಹೀಗಿರುವಾಗ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆಗೆ ಮಾಧ್ಯಮದವರು ಪ್ರತಿಕ್ರಿಯೆ ಕೇಳಿದ್ದಾರೆ. ಈ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮಾಯಾವತಿ, 'ಅಮಿತ್ ಶಾ ವಾಸ್ತವಿಕತೆಯನ್ನು ಒಪ್ಪಿಕೊಂಡಿರುವುದು ಅವರ ಉದಾರತೆ ಎಂದು ನಾನು ಭಾವಿಸುತ್ತೇನೆ. ಬಿಎಸ್ಪಿ ದಲಿತರು ಮತ್ತು ಮುಸ್ಲಿಮರಿಂದ ಮಾತ್ರವಲ್ಲದೆ ಇಡೀ ಉತ್ತರ ಪ್ರದೇಶದ ಹಿಂದುಳಿದ ವರ್ಗಗಳಿಂದಲೂ ಬೆಂಬಲ ಪಡೆಯುತ್ತಿದೆ ಎಂದು ನಾನು ಅವರಿಗೆ ಹೇಳಲು ಬಯಸುತ್ತೇನೆ. ಮೇಲ್ಜಾತಿಯವರೂ ಇದ್ದಾರೆ. ಬಿಎಸ್ಪಿ ಇಡೀ ಸಮಾಜದ ಮತ ಪಡೆಯುತ್ತಿದೆ,ಎಂದು ಮಾಯವತಿ ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ, 2007ರಂತೆಯೇ ಸಂಪೂರ್ಣ ಬಹುಮತದ ಆಧಾರದ ಮೇಲೆ ಖಂಡಿತವಾಗಿಯೂ ತಮ್ಮ ಸರ್ಕಾರವನ್ನು ರಚಿಸುವುದಾಗಿ ಮಾಯವತಿ ಹೇಳಿಕೊಂಡಿದ್ದಾರೆ. ಈ ಬಾರಿ ಎಸ್‌ಪಿ ಅಧ್ಯಕ್ಷ ಅಖಿಲೇಶ್ ಯಾದವ್ ಅವರು ಜಾಟ್ ಮತದಲ್ಲಿ ದಕ್ಕೆ ಮಾಡುವ ಬಗ್ಗೆ ಹೇಳಿಕೆ ನೀಡಿದ್ದು, ಜಾಟ್ ಮತಗಳನ್ನು ಪಡೆಯುವುದು ಅವರ ಕನಸಾಗಿ ಉಳಿಯುತ್ತದೆ ಎಂದು ಮಾಯಾವತಿ ಹೇಳಿದ್ದಾರೆ. ಅಖಿಲೇಶ್ ಅವರು ತಮ್ಮ ಯಾದವ್ ಬಂಧುಗಳ ಮತ ಗಳಿಸಲು ಸಾಧ್ಯವೇ ಇಲ್ಲವೇ ಎಂದು ಮೊದಲು ಯೋಚಿಸಬೇಕು. ಅಖಿಲೇಶ್ ಒಬ್ಬ ನಕಲಿ ಅಂಬೇಡ್ಕರ್‌ವಾದಿ ಎಂದು ಆರೋಪಿಸಿದರು. ದಲಿತ ಗುರುಗಳು ಮತ್ತು ಮಹಾಪುರುಷರ ಹೆಸರಿನ ಜಿಲ್ಲೆಗಳು ಮತ್ತು ಯೋಜನೆಗಳನ್ನು ಅವರು ಹೇಗೆ ಬದಲಾಯಿಸಿದರು ಎಂಬುದು ನಮಗೆ ನೆನಪಿದೆ ಎಂದೂ ಕಿಡಿ ಕಾರಿದರು.