Asianet Suvarna News Asianet Suvarna News

ಕಾಶ್ಮೀರವನ್ನು ಬಿಟ್ಟು ಹೊರಡಿ, ಪಂಡಿತರ ಮನೆಗೆ ಉಗ್ರರಿಂದ ಎಚ್ಚರಿಕೆ ಪತ್ರ..!

'ಪ್ರಧಾನಿ ನರೇಂದ್ರ ಮೋದಿಯಾಗಲಿ (PM Modi) ಗೃಹ ಮಂತ್ರಿ ಅಮಿತ್ ಶಾ (Amit Shah) ಆಗಲಿ ಯಾರೂ ನಿಮ್ಮನ್ನು ಉಳಿಸಲು ಸಾಧ್ಯವಿಲ್ಲ. ಯಾರು ಅಲ್ಲಾಹೋವನ್ನು ನಂಬುತ್ತಾರೋ ಅವರು ಮಾತ್ರ ಕಾಶ್ಮೀರದಲ್ಲಿ ಇರಲು ಅರ್ಹರು, ಇಲ್ಲದಿದ್ರೆ ಕಣಿವೆ ಬಿಟ್ಟು ಹೊರಡಿ ಎಂದು' ಪಂಡಿತರಿಗೆ ಉಗ್ರರು ಎಚ್ಚರಿಸಿದ್ದಾರೆ. 

ಶ್ರೀನಗರ (ಮೇ. 15): ಜಮ್ಮು-ಕಾಶ್ಮೀರದಲ್ಲಿ (Jammu Kashmir) ಪಂಡಿತರ ಮೇಲೆ ಉಗ್ರರ ಅಟ್ಟಹಾಸ ಮುಂದುವರಿದಿದೆ. ಕಾಶ್ಮೀರದ ಬುದ್ಗಾಮ್‌ ಜಿಲ್ಲೆಯಲ್ಲಿ ಕಾಶ್ಮೀರಿ ಪಂಡಿತ ಸಮುದಾಯಕ್ಕೆ ಸೇರಿದ ಸರ್ಕಾರಿ ಉದ್ಯೋಗಿಯನ್ನು ಅವರು ಆತನ ಕಚೇರಿಯಲ್ಲೇ ಹತ್ಯೆ ಮಾಡಿದ್ದಾರೆ.

ಕಾಶ್ಮೀರಿ ಹಿಂದೂ ರಾಹುಲ್ ಭಟ್ ಹತ್ಯೆ ಮಾಡಿದ 3 ಭಯೋತ್ಪಾದಕರಿಗೆ ಗುಂಡಿಕ್ಕಿದ ಭಾರತೀಯ ಸೇನೆ!

ತಹಶೀಲ್ದಾರ್‌ ಕಚೇರಿಯಲ್ಲಿ ಕ್ಲರ್ಕ್ ಆಗಿದ್ದ ರಾಹುಲ್‌ ಭಟ್‌ ಮೃತ ದುರ್ದೈವಿ. ಲಷ್ಕರ್‌-ಎ-ತೊಯ್ಬಾ ಉಗ್ರ ಸಂಘಟನೆ ಈ ದಾಳಿಯ ಹೊಣೆ ಹೊತ್ತಿದೆ. ಭಟ್‌ ಹತ್ಯೆಯನ್ನು ರಾಜಕೀಯ ಪಕ್ಷಗಳು ತೀವ್ರವಾಗಿ ಖಂಡಿಸಿವೆ. ಇನ್ನೊಂದು ಕಡೆ ಉಗ್ರರು (Terrorists) ಕಾಶ್ಮೀರಿ ಪಂಡಿತರಿಗೆ ಕಾಶ್ಮೀರ ಬಿಟ್ಟು ಹೋಗುವಂತೆ ಪತ್ರ ಬರೆದಿದ್ದಾರೆ. 

ಪ್ರಧಾನಿ ನರೇಂದ್ರ ಮೋದಿಯಾಗಲಿ (PM Modi) ಗೃಹ ಮಂತ್ರಿ ಅಮಿತ್ ಶಾ (Amit Shah) ಆಗಲಿ ಯಾರೂ ನಿಮ್ಮನ್ನು ಉಳಿಸಲು ಸಾಧ್ಯವಿಲ್ಲ. ಯಾರು ಅಲ್ಲಾಹೋವನ್ನು ನಂಬುತ್ತಾರೋ ಅವರು ಮಾತ್ರ ಕಾಶ್ಮೀರದಲ್ಲಿ ಇರಲು ಅರ್ಹರು, ಇಲ್ಲದಿದ್ರೆ ಕಣಿವೆ ಬಿಟ್ಟು ಹೊರಡಿ' ಎಂದು ಎಚ್ಚರಿಸಿದ್ದಾರೆ.