UP Elections: 7ನೇ ಹಂತದ ಮತದಾನ, ಯೋಗಿ ಸಂಪುಟದ ಐವರು ಸಚಿವರಿಗೆ ಅಗ್ನಿಪರೀಕ್ಷೆ!

ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯ ಆರು ಹಂತಗಳ ಮತದಾನ ಮುಗಿದಿದ್ದು, ಏಳನೇ ಹಂತದ ಮತದಾನಕ್ಕೆ ಭರದ ಸಿದ್ಧತೆ ನಡೆದಿವೆ. ಅಂತಿಮ ಹಂತದ ಈ ಮತದಾನ ಮಾರ್ಚ್ 7 ರಂದು ನಡೆಯಲಿದೆ. ರಾಜ್ಯದ 9 ಜಿಲ್ಲೆಗಳ 54 ಕ್ಷೇತ್ರಗಳಲ್ಲಿ ಈ ಮತದಾನ ನಡೆಯಲಿದೆ. ಶನಿವಾರ ಸಂಜೆ 6 ಗಂಟೆಗೆ ಚುನಾವಣಾ ಪ್ರಚಾರ ಅಂತ್ಯಗೊಂಡಿದ್ದು,  ಎಲ್ಲಾ ರಾಜಕೀಯ ಪಕ್ಷಗಳು ಶಕ್ತಿಮೀರಿ ಪ್ರಚಾರ ನಡೆಸಿವೆ. ಅಂತಿಮ ಹಂತದಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರ ಸಂಸದೀಯ ಕ್ಷೇತ್ರ ವಾರಣಾಸಿ ಸೇರಿದಂತೆ ಪೂರ್ವಾಂಚಲ್‌ನ 9 ಜಿಲ್ಲೆಗಳನ್ನು ಸೇರಿಸಲಾಗಿದೆ. ಇದುವರೆಗೆ ಯುಪಿಯ 403 ಸ್ಥಾನಗಳ ಪೈಕಿ 349 ಕ್ಷೇತ್ರಗಳಲ್ಲಿ ಮತದಾನ ನಡೆದಿದೆ.

Share this Video
  • FB
  • Linkdin
  • Whatsapp

ಲಕ್ನೋ(ಮಾ.07): ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯ ಆರು ಹಂತಗಳ ಮತದಾನ ಮುಗಿದಿದ್ದು, ಏಳನೇ ಹಂತದ ಮತದಾನಕ್ಕೆ ಭರದ ಸಿದ್ಧತೆ ನಡೆದಿವೆ. ಅಂತಿಮ ಹಂತದ ಈ ಮತದಾನ ಮಾರ್ಚ್ 7 ರಂದು ನಡೆಯಲಿದೆ. ರಾಜ್ಯದ 9 ಜಿಲ್ಲೆಗಳ 54 ಕ್ಷೇತ್ರಗಳಲ್ಲಿ ಈ ಮತದಾನ ನಡೆಯಲಿದೆ. ಶನಿವಾರ ಸಂಜೆ 6 ಗಂಟೆಗೆ ಚುನಾವಣಾ ಪ್ರಚಾರ ಅಂತ್ಯಗೊಂಡಿದ್ದು, ಎಲ್ಲಾ ರಾಜಕೀಯ ಪಕ್ಷಗಳು ಶಕ್ತಿಮೀರಿ ಪ್ರಚಾರ ನಡೆಸಿವೆ. ಅಂತಿಮ ಹಂತದಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರ ಸಂಸದೀಯ ಕ್ಷೇತ್ರ ವಾರಣಾಸಿ ಸೇರಿದಂತೆ ಪೂರ್ವಾಂಚಲ್‌ನ 9 ಜಿಲ್ಲೆಗಳನ್ನು ಸೇರಿಸಲಾಗಿದೆ. ಇದುವರೆಗೆ ಯುಪಿಯ 403 ಸ್ಥಾನಗಳ ಪೈಕಿ 349 ಕ್ಷೇತ್ರಗಳಲ್ಲಿ ಮತದಾನ ನಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಏಳನೇ ಹಂತದಲ್ಲಿ ಹಲವು ರಾಜಕೀಯ ದಿಗ್ಗಜರು ಸೇರಿದಂತೆ ಯೋಗಿ ಸರ್ಕಾರದ ಆರು ಸಚಿವರು ಅಗ್ನಿಪರೀಕ್ಷೆ ಎದುರಿಸಲಿದ್ದಾರೆ. ಈ ಪೈಕಿ ಐವರು ಹಾಲಿ ಸಚಿವರು. ಮಾರ್ಚ್ 7 ರಂದು ಅಜಂಗಢ, ಮೌ, ಜೌನ್‌ಪುರ್, ಘಾಜಿಪುರ, ಚಂದೌಲಿ, ವಾರಣಾಸಿ, ಮಿರ್ಜಾಪುರ, ಸೋನ್‌ಭದ್ರ ಮತ್ತು ಭದೋಹಿ ಜಿಲ್ಲೆಗಳಲ್ಲಿ ಮತದಾನ ನಡೆಯಲಿದೆ. ಈ ಜಿಲ್ಲೆಗಳ 54 ಸ್ಥಾನಗಳಲ್ಲಿ ಒಟ್ಟು 613 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 2.06 ಕೋಟಿ ಮತದಾರರು ತಮ್ಮ ಭವಿಷ್ಯವನ್ನು ನಿರ್ಧರಿಸಲಿದ್ದಾರೆ. 2017 ರ ವಿಧಾನಸಭಾ ಚುನಾವಣೆಯಲ್ಲಿ, ಈ 54 ಸ್ಥಾನಗಳಲ್ಲಿ, ಬಿಜೆಪಿ 29, ಎಸ್‌ಪಿ 11, ಬಿಎಸ್‌ಪಿ 6, ಅಪ್ನಾ ದಳ (ಎಸ್) 4, ಎಸ್‌ಪಿ 3 ಮತ್ತು ನಿಶಾದ್ ಪಕ್ಷ 1 ಸ್ಥಾನವನ್ನು ಗೆದ್ದಿದೆ.

Related Video