Asianet Suvarna News Asianet Suvarna News

ಉಗ್ರ ಸಂಘಟನೆ ಸೇರಿದ ಕೇರಳ ಮಹಿಳೆಯರನ್ನು ಭಾರತಕ್ಕೆ ಕರೆತರಲು ಹೈಕೋರ್ಟ್ ನಕಾರ!

Jul 3, 2021, 11:35 PM IST

2016ರಲ್ಲಿ ಇಸ್ಲಾಂಗೆ ಮತಾಂತರಗೊಂಡು ಕೇರಳದ ಇಬ್ಬರು ಹಿಂದೂ ಹಾಗೂ ಇಬ್ಬರು ಕ್ರೈಸ್ತ ಯುವತಿಯರು ತಮ್ಮ ಗಂಡಂದಿರ ಜೊತೆ ಐಸಿಸ್ ಉಗ್ರ ಸಂಘಟನೆ ಸೇರಿಕೊಂಡಿದ್ದರು. ಕೇರಳದಿಂದ ಅಫ್ಘಾನಿಸ್ತಾನದ ಕಾಬೂಲ್‌ಗೆ ತೆರಳಿ ಉಗ್ರ ಸಂಘಟನೆಯಲ್ಲಿ ತೊಡಗಿಸಿಕೊಂಡ ಈ ಯುವತಿಯರ ಗಂಡಂದಿರು 2018ರಲ್ಲಿ ಅಮೆರಿಕ ಬಾಂಬ್ ದಾಳಿಯಲ್ಲಿ ಮೃತಪಟ್ಟಿದ್ದಾರೆ. ಇದೀಗ ಜೈಲಿನಲ್ಲಿರುವ ಈ ಯುವತಿಯೊಬ್ಬಳನ್ನು ಭಾರತಕ್ಕೆ ಕರೆ ತರಲು  ತಾಯಿ ಕೇರಳ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಇನ್ನು ಕರ್ನಾಟಕ ಅನ್‌ಲಾಕ್, ಡೆಲ್ಟಾ ವೇರಿಯೆಂಟ್ ಸೇರಿದಂತೆ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.