Operation Ganga: ದೆಹಲಿಯಿಂದ ಬೆಂಗಳೂರಿಗೆ 36 ಕನ್ನಡಿಗರು ವಾಪಸ್
ಆಪರೇಷನ್ ಗಂಗಾ' ಕಾರ್ಯಾಚರಣೆ ಮುಂದುವರೆದಿದೆ. ದೆಹಲಿಯಿಂದ ಬೆಂಗಳೂರಿಗೆ ಇಂದು 36 ವಿದ್ಯಾರ್ಥಿಗಳು ಬಂದಿಳಿದಿದ್ದಾರೆ. ಮಕ್ಕಳನ್ನು ಬರಮಾಡಿಕೊಂಡ ಪೋಷಕರು ಭಾವುಕರಾದರು. ಖಾರ್ಕೀವ್, ಕೀವ್ ನಗರಗಳಿಂದ ವಾಪಸ್ಸಾಗಿದ್ದಾರೆ.
ಆಪರೇಷನ್ ಗಂಗಾ' ಕಾರ್ಯಾಚರಣೆ ಮುಂದುವರೆದಿದೆ. ದೆಹಲಿಯಿಂದ ಬೆಂಗಳೂರಿಗೆ ಇಂದು 36 ವಿದ್ಯಾರ್ಥಿಗಳು ಬಂದಿಳಿದಿದ್ದಾರೆ. ಮಕ್ಕಳನ್ನು ಬರಮಾಡಿಕೊಂಡ ಪೋಷಕರು ಭಾವುಕರಾದರು. ಖಾರ್ಕೀವ್, ಕೀವ್ ನಗರಗಳಿಂದ ವಾಪಸ್ಸಾಗಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಯುದ್ಧಪೀಡಿತ ಉಕ್ರೇನ್‌ನಲ್ಲಿ ಸಿಲುಕಿದ್ದ 16000ಕ್ಕೂ ಹೆಚ್ಚು ಭಾರತೀಯರನ್ನು ರಕ್ಷಿಸುವ ‘ಆಪರೇಷನ್ ಗಂಗಾ’ ಬೃಹತ್ ಏರ್‌ಲಿಫ್ಟ್ ಕಾರ್ಯಾಚರಣೆ ಬಹುತೇಕ ಅಂತಿಮ ಹಂತಕ್ಕೆ ತಲುಪಿದೆ. ಭಾರತೀಯ ವಾಯುಪಡೆ ಕೂಡ ಈವರೆಗೆ 10 ವಿಮಾನಗಳಲ್ಲಿ 2056 ಭಾರತೀಯರನ್ನು ಉಕ್ರೇನ್‌ನ ಅಕ್ಕಪಕ್ಕದ ದೇಶಗಳಿಂದ ಕರೆತಂದಿದೆ. ಜೊತೆಗೆ 26 ಟನ್ ನೆರವಿನ ಸಾಮಗ್ರಿಗಳನ್ನು ಉಕ್ರೇನ್‌ಗೆ ತಲುಪಿಸಿದೆ. ಇನ್ನುಳಿದಂತೆ ಇಂಡಿಗೋ, ಏರ್ ಇಂಡಿಯಾ, ವಿಸ್ತಾರ ಹಾಗೂ ಸ್ಪೈಸ್‌ಜೆಟ್ ವಿಮಾನಯಾನ ಕಂಪನಿಗಳು ಆಪರೇಷನ್ ಗಂಗಾ ಅಡಿ ಭಾರತ ಸರ್ಕಾರದ ಜೊತೆ ಕೈಜೋಡಿಸಿ ನಾಗರಿಕರನ್ನು ಕರೆತರುತ್ತಿವೆ.