
ಅದೃಷ್ಟ ಪರೀಕ್ಷೆಗೆ ಉಳಿದಿರೋದು ಎರಡೇ ವರ್ಷ: ಮತ್ತೆ ಘಟಿಸುತ್ತಾ 2019ರ ಮ್ಯಾಜಿಕ್?
ಬರ್ಲಿನ್ ಸಂಭಾಂಗಣದಲ್ಲಿ ಮಾರ್ದನಿಸಿತ್ತು ಮೋದಿ ಒನ್ಸ್ ಮೋರ್ ಎಂಬ ಕೂಗು.. ಹಾಗಾದ್ರೆ ಮತ್ತೆ ಘಟಿಸುತ್ತಾ 2019ರ ಆ ಮ್ಯಾಜಿಕ್..? ಆ ಅದೃಷ್ಟ ಪರೀಕ್ಷೆಗೆ ಬಾಕಿ ಉಳಿದಿರೋದು ಎರಡೇ ವರ್ಷ.. 3 ದೇಶಗಳ ಪರ್ಯಾಟನೆ ಬಳಿಕ ಹೇಗಿರಲಿದೆ ಮೋದಿ ಹವಾ..?
ಬರ್ಲಿನ್(ಮೇ.04): 2024.. ಮೋದಿ ಒನ್ಸ್ ಮೋರ್.. ಇಂಥದ್ದೊಂದು ಘೋಷಣೆ ಮಾರ್ದನಿಸಿದ್ದು ಬರ್ಲಿನ್ಅಲ್ಲಿ.. ಸಧ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಜರ್ಮನಿ ಪ್ರವಾಸದಲ್ಲಿದ್ದಾರೆ.. ಹೀಗಿರುವಾಗ ಬರ್ಲಿನ್ಗೆ ಭೇಟಿ ಕೊಟ್ಟ ಮೋದಿ ಅವರಿಗೆ ಭಾರತೀಯ ಸಮುದಾಯದಿಂದ ಭರ್ಜರಿ ಸ್ವಾಗತ ಸಿಕ್ಕಿದೆ.. ಬರ್ಲಿನ್‌ನಲ್ಲಿ ವೇದಿಕೆ ಮೇಲೆ ಮಾತನಾಡೋಕೆ ಅಂತ ಮೋದಿ ಬರುವಾಗ್ಲೇ, 2024ರಲ್ಲೂ ಮತ್ತೆ ಮೋದಿಯೇ ಗೆದ್ದು ಬರ್ಬೇಕು ಅಂತ ಈ ಥರ ಘೋಷಣೆ ಕೂಗಿದ್ದಾರೆ..
ಕಿಕ್ಕಿರಿದು ತುಂಬಿದ್ದ ಸಮಾರಂಭ.. ಎಲ್ಲರೂ ಕಾತುರದ ಕಣ್ಣುಗಳಿಂದ ಕಾಯ್ತಾ ಇದ್ರು.. ಅದೇ ಹೊತ್ತಿಗೆ ಪ್ರಧಾನಿ ಮೋದಿ ಅವರು ಆನ್ ಸ್ಟೇಜ್ ಕಾಣಿಸಿಕೊಂಡ್ರು.. ಇಷ್ಟು ಸಾಕಾಗಿತ್ತು ಮೋದಿ ಅವರನ್ನ ಪ್ರೀತಿಸೋ ಜನರೊಳಗೆ ಉತ್ಸಾಹ ಉಕ್ಕಿಬಂದಿತ್ತು.. ಹಾಗಾಗಿನೇ ಮೋದಿ ಅವರನ್ನ ಕಂಡೊಡನೆ ಜನರು ಹರ್ಷೋದ್ಗಾರ ಮಾಡಿದ್ರು.. ಸಭಾಂಗಣದಲ್ಲಿ ಜೋರಾದ ಕೂಗು, ಸಿಳ್ಳೆ ಮತ್ತು ಚಪ್ಪಾಳೆಯ ಜತೆಗೆ ಭಾರತದ ಬಾವುಟ ಹಾರಿಸಿ ಸಂಭ್ರಮಿಸಿದರು.. 2024 ಮೋದಿ ಒನ್ಸ್ ಮೋರ್ ಅಂತ ಪದೇ ಪದೇ ಘೋಷಣೆ ಕೂಗಿದ್ರು..
ಒಂದು ರಷ್ಯಾ ಮತ್ತು ಉಕ್ರೇನ್ ನಡುವೆ ನಡೀತಿರೋ ಯುದ್ಧ ಇಡೀ ಜಗತ್ತಿನ ದಿಕ್ಕು ದಿಸೆಯನ್ನೇ ಬದಲಾಯಿಸಿಬಿಟ್ಟಿದೆ.. ಅದರ ಎಫೆಕ್ಟ್ ಅಮೆರಿಕಾದಂಥಾ ದೊಡ್ಡ ದೇಶವೇ ತಲ್ಲಣಿಸಿ ಹೋಗಿದೆ.. ಅಷ್ಟೇ ಅಲ್ಲ, ಇವತ್ತಿನ ತನಕ ಇರೋ ವಿಶ್ವ ವ್ಯವಸ್ಥೆಯೇ ಬದಲಾಗುತ್ತೇನೋ ಅನ್ನೋ ಅನುಮಾನ ಹುಟ್ಟಿಕೊಂಡಿದೆ.. ಅದರಲ್ಲೂ ಮುಖ್ಯವಾಗಿ, ನ್ಯಾಟೋ ದೇಶಗಳ ಸಾಲಿನಲ್ಲಿರೋ ಯುರೋಪಿಯನ್ ದೇಶಗಳಂತೂ ಪ್ರತಿ ಕ್ಷಣ ಕಳವಳದಲ್ಲೇ ಕಳೆಯೋ ಹಾಗಾಗಿದೆ.