
ದೆಹಲಿಯಲ್ಲಿ ಕೊರೋನಾ ಸ್ಫೋಟ: ರಾಮಲೀಲಾ ಮೈದಾನಲ್ಲಿ ಬೃಹತ್ ಕೋವಿಡ್ ಸೆಂಟರ್!
ದೆಹಲಿಯ ರಾಮ್‌ಲೀಲಾ ಮೈದಾನ ಐತಿಹಾಸಿಕ ಹಿನ್ನೆಲೆ ಇರುವ ಮೈದಾನ. ಈ ಮೈದಾನ ಹತ್ತಾರು ಹೋರಾಟಗಳಿಗೆ ಸಾಕ್ಷಿಯಾಗಿದ್ದ ಮೈದಾನ. ಆದರೀಗ ಇಂದು ಇದು ದೆಹಲಿಯಲ್ಲಿ ತಲೆದೋರಿರುವ ಹೆಲ್ತ್ ಎಮರ್ಜೆನ್ಸಿ ಸಂದರ್ಭದಲ್ಲಿ ಕೋವಿಡ್ ಸೆಂಟರ್ ಆಗಿ ಮಾರ್ಪಾಡಾಗಲಿದೆ.
ನವದೆಹಲಿ(ಏ.29) ದೆಹಲಿಯ ರಾಮ್‌ಲೀಲಾ ಮೈದಾನ ಐತಿಹಾಸಿಕ ಹಿನ್ನೆಲೆ ಇರುವ ಮೈದಾನ. ಈ ಮೈದಾನ ಹತ್ತಾರು ಹೋರಾಟಗಳಿಗೆ ಸಾಕ್ಷಿಯಾಗಿದ್ದ ಮೈದಾನ. ಆದರೀಗ ಇಂದು ಇದು ದೆಹಲಿಯಲ್ಲಿ ತಲೆದೋರಿರುವ ಹೆಲ್ತ್ ಎಮರ್ಜೆನ್ಸಿ ಸಂದರ್ಭದಲ್ಲಿ ಕೋವಿಡ್ ಸೆಂಟರ್ ಆಗಿ ಮಾರ್ಪಾಡಾಗಲಿದೆ.
1000 ಐಸಿಯು ಬೆಡ್‌ಗಳ ಕೊವಿಡ್ ಸೆಂಟರ್ ದೆಹಲಿಯ ರಾಮ್‌ಲೀಲಾ ಮೈದಾನದಲ್ಲಿ ನಿರ್ಮಾಣವಾಗಲಿದ್ದು, ಇದರ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ. ಮೇ 10 ರ ಒಳಗಾಗಿ 1000 ಹಾಸಿಗೆಯ ಕೋವಿಡ್ ಸೆಂಟರ್ ಬಳಕೆಗೆ ಸಿದ್ದಗೊಳ್ಳಲಿದೆ. ಕೇಂದ್ರ ಸರ್ಕಾರ ಎಲ್‌ಎನ್‌ಜೆಪಿ ಆಸ್ಪತ್ರೆಯ ನಿಗಾದಡಿ 500, ಜಿಟಿಬಿ ಆಸ್ಪತ್ರೆಯ ನಿಗಾದಡಿ 500 ಐಸಿಯು ಬೆಡ್ ವ್ಯವಸ್ಥೆ ಮಾಡಲಾಗುತ್ತದೆ.
ಸದ್ಯ ದೆಹಲಿ ಸರ್ಕಾರಕ್ಕೂ ಕೊರೋನಾ ಬಹುದೊಡ್ಡ ತಲೆ ನೋವಾಗಿದ್ದು, ಮೇ ತಿಂಗಳಲ್ಲಿ ಪರಿಸ್ಥಿತಿ ಮತ್ತಷ್ಟು ವಿಕೋಪಕ್ಕೆ ಹೋಗಲಿದೆ ಎಂದು ಅಂದಾಜಿಸಲಾಗಿದೆ. ಈ ಹಿನ್ನೆಲೆಯಲ್ಲಿ ರಾಮಲೀಲಾ ಮೈದಾನದಲ್ಲಿ ಭರದ ಸಿದ್ದತೆ ಆರಂಭಿಸಲಾಗಿದೆ.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona