Asianet Suvarna News Asianet Suvarna News

  ಜಲನೇತಿ ಮಾಡಿದರೆ ಕೊರೋನಾದಿಂದ ಮುಕ್ತಿ, ಏನ್ ಹೇಳ್ತಾರೆ ಕೇಳಿ ಈ ಡಾಕ್ಟರ್?

  Jul 1, 2020, 6:18 PM IST

  ಪುಣೆ(ಜು.  01)  ಯೋಗ ಪರಂಪರೆ ಬಗ್ಗೆ ಭಾರತೀಯರಿಗೆ ಹೊಸದಾಗಿ ಹೇಳಬೇಕಾಗಿಲ್ಲ.  ಜಲನೇತಿಗೂ ತನ್ನದೇ ಆದ ಮಹತ್ವ ಇದ್ದು ಮತ್ತೊಮ್ಮೆ ಸಾಬೀತಾಗಿದೆ.

  ಪುಣೆಯ ವೈದ್ಯ ಡಾ. ಕೇಲ್ಕರ್ ಜಲನೇತಿ ಪ್ರಾತ್ಯಕ್ಷಿಕೆ ಮಾಡಿ ತೋರಿಸಿದ್ದು ಪ್ರತಿದಿನ ಈ ಅಭ್ಯಾಸ ಇಟ್ಟುಕೊಂಡು ಕೊರೋನಾ ರೋಗಿಗಳ ಆರೈಕೆ ಮಾಡುತ್ತಿರುವ ಯಾವ ವೈದ್ಯರಿಗೂ ಸೋಂಕು ತಗುಲಿಲ್ಲ ಎಂಬುದದನ್ನು ತಿಳಿಸಿದ್ದಾರೆ.

  ಮಲುಗುವ ಮುನ್ನ ಈ ಯೋಗಾಭ್ಯಾಸ ಮಾಡಿದ್ರೆ ಗಾಢ ನಿದ್ರೆ

  ಸರಳವಾಗಿ ಹೇಳಬೇಕು ಎಂದರೆ ಉಗುರು ಬೆಚ್ಚಗಿನ ಉಪ್ಪು ನೀರನ್ನು ಉಪಯೋಗಿಸಿ ಮೂಗಿನ ಹೊಳ್ಳೆಗಳು ಮತ್ತು ಉಸಿರಾಟ ವ್ಯವಸ್ಥೆಯನ್ನು ಸ್ವಚ್ಛಗೊಳಿಸುವ ಕ್ರಿಯೆಯೇ ಜಲನೇತಿ.

  ಇದು ತೆಗೆದುಕೊಳ್ಳುವುದು ಕೇವಲ ಐದು ನಿಮಿಷ ಮಾತ್ರ.  ಮೂಗನ್ನು ಸ್ವಚ್ಛವಾಗಿರಿಸಿಕೊಂಡು ಒಂದು ಮೂಗಿನ ಹೊಳ್ಳೆಯಿಂದ ನೀರು ತೆಗೆದುಕೊಂಡು ಇನ್ನೊಂದು ಮೂಗಿನ ಹೊಳ್ಳೆಯಿಂದ ಬಿಡಬೇಕಾಗುತ್ತದೆ. ಇದೇ ರೀತಿ ಪುನರಾವರ್ತನೆ ಮಾಡಬೇಕಾಗುತ್ತದೆ. ಕೊನೆಯಲ್ಲಿ ಉಸಿರನ್ನು ಜೋರಾಗಿ ಹೊರಗೆ ಬಿಟ್ಟು ರಿಲ್ಯಾಕ್ಸ್ ಆದರೆ ಜಲನೇತಿ ಮುಗಿಯಿತು. ತಲೆನೋವು, ಒತ್ತಡ, ಉಸಿರಾಟ ಸಮಸ್ಯೆ ಎಲ್ಲದಕ್ಕೂ ಇದು ಪರಿಹಾರ. ಈ ವೈದ್ಯರು ಉಪ್ಪು ನೀರನ್ನು ಬಳಸಿಲ್ಲ.