Asianet Suvarna News Asianet Suvarna News

ನಿರ್ಲಕ್ಷ್ಯ ಬೇಡ: ಯುವಕರೇ ಹೃದಯದ ಕಡೆ ಗಮನ ಹರಿಸಿ..!

ಕೊರೋನಾ ಮಧ್ಯೆ ಆರೋಗ್ಯದ ನಿರ್ಲಕ್ಷ್ಯ ಮಾಡಬೇಡಿ. ಹೃದ್ರೋಗ ತಜ್ಞ ಮಂಜುನಾಥ್ ಅವರು ಹೃದಯ ಸಂಬಂಧಿ ಕಾಯಿಲೆ ಹೆಚ್ಚಳದ ಬಗ್ಗೆ ಎಚ್ಚರಿಕೆ ಕೊಟ್ಟಿದ್ದಾರೆ. 2030ರ ವೇಳೆಗೆ ಭಾರತವೇ ಹೃದ್ರೋಗದಲ್ಲಿ ನಂಬರ್ 1 ದೇಶವಾಗಲಿದೆ.

ಕೊರೋನಾ ಮಧ್ಯೆ ಆರೋಗ್ಯದ ನಿರ್ಲಕ್ಷ್ಯ ಮಾಡಬೇಡಿ. ಹೃದ್ರೋಗ ತಜ್ಞ ಮಂಜುನಾಥ್ ಅವರು ಹೃದಯ ಸಂಬಂಧಿ ಕಾಯಿಲೆ ಹೆಚ್ಚಳದ ಬಗ್ಗೆ ಎಚ್ಚರಿಕೆ ಕೊಟ್ಟಿದ್ದಾರೆ. 2030ರ ವೇಳೆಗೆ ಭಾರತವೇ ಹೃದ್ರೋಗದಲ್ಲಿ ನಂಬರ್ 1 ದೇಶವಾಗಲಿದೆ. ಈಗಾಗಲೇ ಬೆಂಗಳೂರು  ಡಯಾಬಿಟಿಸ್ ಕ್ಯಾಪಿಟಲ್ ಆಗಿ ಬದಲಾಗುತ್ತಿದೆ. ಸಕ್ಕರೆ ಕಾಯಿಲೆ ಇದ್ದವರಿಗೆ ಹೃದಯಾಘಾತದ ಅಪಾಯವೂ ಹೆಚ್ಚಾಗಿದ್ದು ಯುವಕರು ಹೃದಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕಾಗಿದೆ.

2030ಕ್ಕೆ ಹೃದ್ರೋಗದಲ್ಲಿ ಭಾರತವೇ ನಂಬರ್‌ 1: ತಜ್ಞರ ಶಾಕಿಂಗ್ ಮಾಹಿತಿ

ಈಗಾಗಲೇ 40 ವರ್ಷದ ಆಸುಪಾಸಿನಲ್ಲಿರುವ ಜನರಲ್ಲಿ ಹೃದಯಾಘಾತದ ಪ್ರಕರಣ ಹೆಚ್ಚಾಗುತ್ತಿದ್ದು, ಇದುವೇ ದೊಡ್ಡ ಸೈಲೆಂಟ್ ಕಿಲ್ಲರ್ ಆಗಿ ಬದಲಾಗುತ್ತಿದೆ. ಈ ನಿಟ್ಟಿನಲ್ಲಿ ಹೃದಯದ ಕಾಳಜಿ ವಹಿಸುವುದು ಇಂದಿನ ಅತ್ಯಂತ ಅಗತ್ಯದ ಕೆಲಸವಾಗಿದೆ.