ಸ್ಪಿರುಲಿನಾ ಚಿಕ್ಕಿಯಿಂದ ಕೊರೋನಾ ಹೋಗಲ್ಲ, ಯಾರಪ್ಪಾ ಹೇಳಿದ್ದು!

ಸ್ಪಿರುಲಿನಾ ಚಿಕ್ಕಿ ತಿಂದರೆ ಕೋವಿಡ್ 19 ಮಾಯ/ ವರದಿ ಅಲ್ಲಗಳೆದ ಮೈಸೂರಿನ ಕೇಂದ್ರೀಯ ಆಹಾರ ತಂತ್ರಜ್ಞಾನ ಸಂಶೋಧನಾ ಸಂಸ್ಥೆ/ ಇಂಥ ವರದಿಗಳಿಗೆ ಯಾವುದೇ ಆಧಾರ ಇಲ್ಲ

First Published May 10, 2020, 9:21 PM IST | Last Updated May 10, 2020, 9:26 PM IST

ಮೈಸೂರು(ಮೇ 10)  ಸ್ಪಿರುಲಿನಾ ಚಿಕ್ಕಿ ತಿಂದರೆ ಕೋವಿಡ್ 19 ಸೋಂಕು ನಿವಾರಣೆಯಾಗುತ್ತದೆ. ಸೋಂಕು ನಿಯಂತ್ರಣದಲ್ಲಿ ಇದು ರಾಮಬಾಣ ಎಂಬ ವರದಿಗಳನ್ನು ಮೈಸೂರಿನ ಕೇಂದ್ರೀಯ ಆಹಾರ ತಂತ್ರಜ್ಞಾನ ಸಂಶೋಧನ ಸಂಸ್ಥೆ -ಸಿ.ಎಫ್.ಟಿ.ಆರ್.ಐ ಸಂಪೂರ್ಣವಾಗಿ  ಅಲ್ಲಗಳೆದಿದೆ. 

ಕೊರೋನಾಕ್ಕೆ ಲಸಿಕೆ ಕಂಡು ಹಿಡಿದ ಚೀನಾ! ಪ್ರಯೋಗ ಹೇಗೆ

ಸಿ.ಎಫ್.ಟಿ.ಆರ್.ಐ ನಿರ್ದೇಶಕರು ಹೇಳಿಕೆ ನೀಡಿದ್ದು, ಇತ್ತೀಚೆಗೆ ಕೆಲವು ಮಾಧ್ಯಮಗಳಲ್ಲಿ ಸ್ಪಿರುಲಿನಾ ಚಿಕ್ಕಿಗಳು ಕೋವಿಡ್ – 19ಗೆ ರಾಮಬಾಣ ಎಂದು ವರದಿ ಮಾಡಿರುವುದು ಸತ್ಯಕ್ಕೆ ದೂರವಾದ ಸಂಗತಿ ಎಂದು ಸ್ಪಷ್ಟಪಡಿಸಿದ್ದಾರೆ.