ತಮ್ಮನ ಹೆಂಡತಿಯನ್ನೇ ಪಟಾಯಿಸಿಬಿಟ್ಟ ಕಿರಾತಕ! ಕೊಲೆ ಕೇಸ್​​ಗೆ ಟ್ವಿಸ್ಟ್​​ ಕೊಟ್ಟಿತ್ತು ಆ ಒಂದು ಫೋನ್​​ ಕಾಲ್!

ಪೆಟ್ರೋಲ್​​ ಹಾಕಿಸಿಕೊಂಡು ಬರ್ತೀನಿ ಅಂತ ಹೋದ ಗಂಡ ಹೆಣವಾಗಿದ್ದ. ತನಿಖೆಗಿಳಿದ ಪೊಲೀಸರಿಗೆ ಸಿಕ್ಕಿದ್ದು ಅವನ ಅಣ್ಣ. ಅವನನ್ನ ಎತ್ತಾಕೊಂಡು ಬಂದು ವರ್ಕ್​ ಮಾಡಿದ್ರೆ ಆತ ಹೆಳಿದ್ದು ಆನಂದನ ಹೆಂಡತಿ ಹೆಸರನ್ನ. ಹಾಗಾದ್ರೆ ಹೆಂಡತಿ ಮತ್ತು ಸಹೋದರನೇ ಸೇರಿಕೊಂಡು ಆನಂದನನ್ನ ಕೊಂದು ಮುಗಿಸಿದ್ರಾ? ಅಷ್ಟಕ್ಕೂ ಅವರಿಬ್ಬರು ಹೀಗ್ಯಾಕೆ ಮಾಡಿದ್ರು? ಅಂಥಹ ತಪ್ಪು ಆನಂದ ಮಾಡಿದ್ದಾದ್ರೂ ಏನು?

First Published Jan 12, 2025, 12:41 PM IST | Last Updated Jan 12, 2025, 12:41 PM IST

ಅದು 10 ವರ್ಷದ ಸಂಸಾರ. ಇಬ್ಬರು ಮಕ್ಕಳೂ ಆಗಿದ್ವು. ಗಂಡ ಕೂಲಿ ಮಾಡಿ ಕುಟುಂಬವನ್ನ ಸಾಕ್ತಿದ್ದ. ಹೆಂಡತಿ ಮಕ್ಕಳನ್ನ ನೋಡಿಕೊಂಡು ಮನೆಯಲ್ಲೇ ಇರುತ್ತಿದ್ದಳು. ಆದ್ರೆ ಆವತ್ತೊಂದು ದಿನ ಗಾಡಿಗೆ ಪೆಟ್ರೋಲ್​ ಹಾಕಿಸಿಕೊಂಡು ಬರ್ತೀನಿ ಅಂತ ಹೋದ ಗಂಡ ವಾಪಸ್​​ ಬರಲೇ ಇಲ್ಲ. ಹೆಂಡತಿ ಹುಡುಕಬಾರದ ಜಾಗದಲ್ಲೆಲ್ಲಾ ಹುಡುಕಾಡಿದ್ಲು. ಆದ್ರೆ ಯಾವುದೇ ಪ್ರಯೋಜನವಾಗಲಿಲ್ಲ. ಕಂಪ್ಲೆಂಟ್​ ಕೂಡ ಕೊಟ್ಟಳು. ಆದ್ರೆ ಆತ ಕಾಣೆಯಾಗಿ ಮೂರನೇ ದಿನಕ್ಕೆ ಅವನ ಶವ ನಾಲೆಯಲ್ಲಿ ತೇಲುತ್ತಿತ್ತು.

ಪೊಲೀಸರು ಅವನ ಅನುಮಾಸ್ಪದ ಸಾವಿನ ತನಿಖೆ ಆರಂಬಿಸಿದ್ರು. ಆದ್ರೆ ಅವನು ಹೆಣವಾಗಿ ಸಿಕ್ಕ ವಾರದ ಬಳಿಕ ಆ ಕೇಸ್​ಗೆ ಬಿಗ್​ ಟ್ವಿಸ್ಟ್​ ಸಿಕ್ಕಿತ್ತು. ಅವನನ್ನ ಕೊಂದು ನಾಲೆಗೆ ಎಸೆಯಲಾಗಿತ್ತು. ಅಷ್ಟಕ್ಕೂ ಅವನನ್ನ ಕೊಂದಿದ್ಯಾರು? ಯಾಕಾಗಿ ಕೊಂದ್ರು? ಒಬ್ಬ ಅಮಾಯಕನೊಬ್ಬನ ಬರ್ಬರ ಕೊಲೆಯ ಹಿಂದಿನ ರಹಸ್ಯ ಮತ್ತು ಪೊಲೀಸರ ಇನ್ವೆಸ್ಟಿಗೇಷನ್​​​​ ಕಥೆಯೇ ಇವತ್ತಿನ ಎಫ್​​.ಐ.ಆರ್

Video Top Stories