ಡಗ್ಸ್‌ ಮಾರಾಟ ಜಾಲ: ವಿದೇಶಿ ಫುಟ್ಬಾಲಿಗ ಆರೆಸ್ಟ್‌..!

2015ರಲ್ಲಿ ಕ್ರೀಡಾ ವೀಸಾ ಪಡೆದು ಭಾರತಕ್ಕೆ ಆಗಮಿಸಿದ್ದ ಫುಟ್ಬಾಲ್ ಆಟಗಾರ ಡೊಸ್ಸೋ ಖಲಿಫಾ ಇದೀಗ ಡ್ರಗ್ಸ್‌ ಮಾರಾಟ ಜಾಲದಲ್ಲಿ ಸಿಲುಕಿ ಪೊಲೀಸರ ಅತಿಥಿಯಾಗಿದ್ದಾನೆ. ರಾಷ್ಟ್ರ ರಾಜಧಾನಿ ದೆಹಲಿ, ಕೋಲ್ಕತ ಸೇರಿದಂತೆ ಹಲವೆಡೆ ಡೊಸ್ಸೋ ವಾಸ ಮಾಡಿದ್ದ.
 
First Published Feb 11, 2021, 3:03 PM IST | Last Updated Feb 11, 2021, 3:03 PM IST

ಬೆಂಗಳೂರು(ಫೆ.11): ಡ್ರಗ್ಸ್‌ ಪೆಡ್ಲಿಂಗ್‌ ಪ್ರಕರಣಗಳು ಸದ್ಯಕ್ಕೆ ನಿಲ್ಲುವಂತೆ ಕಾಣುತ್ತಿದೆ. ಇಡೀ ಸ್ವಾಸ್ಥ ಸಮಾಜಕ್ಕೆ ಪಿಡುಗಾಗಿ ಪರಿಣಮಿಸಿರುವ ಡ್ರಗ್ಸ್‌ ಜಾಲಕ್ಕೆ ಇದೀಗ ವಿದೇಶಿ ಫುಟ್ಬಾಲಿಗ ಕೂಡಾ ಸಿಲುಕಿದ್ದು, ಆತನನ್ನು ಬೆಂಗಳೂರು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

2015ರಲ್ಲಿ ಕ್ರೀಡಾ ವೀಸಾ ಪಡೆದು ಭಾರತಕ್ಕೆ ಆಗಮಿಸಿದ್ದ ಫುಟ್ಬಾಲ್ ಆಟಗಾರ ಡೊಸ್ಸೋ ಖಲಿಫಾ ಇದೀಗ ಡ್ರಗ್ಸ್‌ ಮಾರಾಟ ಜಾಲದಲ್ಲಿ ಸಿಲುಕಿ ಪೊಲೀಸರ ಅತಿಥಿಯಾಗಿದ್ದಾನೆ. ರಾಷ್ಟ್ರ ರಾಜಧಾನಿ ದೆಹಲಿ, ಕೋಲ್ಕತ ಸೇರಿದಂತೆ ಹಲವೆಡೆ ಡೊಸ್ಸೋ ವಾಸ ಮಾಡಿದ್ದ.

ಮರಡೋನಾ ಸಾವಿನ ಕೇಸ್‌ ತನಿಖೆ ಆರಂಭಿಸಿದ ಅರ್ಜೆಂಟೀನಾ..!

ಐವರಿ ಕೋಸ್ಟ್‌ ನಿವಾಸಿಯಾಗಿದ್ದ ಡೊಸ್ಸೋ, ಡ್ರಗ್ಸ್‌ ಜಾಲದಲ್ಲಿ ಸಿಕ್ಕಿಬಿದ್ದ ಬಿಡಿಎ ರವಿ ಅಲಿಯಾಸ್ ರವಿಕುಮಾರ್, ಡೊಸ್ಸೋ ಬಗ್ಗೆ ಬಾಯ್ಬಿಟ್ಟಿದ್ದಾನೆ. 2018ರಲ್ಲಿ ಡೊಸ್ಸೋ ಬೆಂಗಳೂರಿಗೆ ಬಂದು ಡ್ರಗ್ಸ್‌ ಜಾಲದಲ್ಲಿ ಸಕ್ರಿಯನಾಗಿದ್ದ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.