FIFA World Cup ಫ್ರಾನ್ಸ್ Vs ಅರ್ಜೆಂಟೀನಾ ಹೋರಾಟಕ್ಕೆ ಕಾತರ, ಯಾರಾಗ್ತಾರೆ ವಿಶ್ವ ಚಾಂಪಿಯನ್?

ಕತಾರ್ ಫಿಫಾ ವಿಶ್ವಕಪ್ ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಶುರುವಾಗಿದೆ. ಪ್ರಶಸ್ತಿಗಾಗಿ ಹಾಲಿ ಚಾಂಪಿಯನ್  ಫ್ರಾನ್ಸ್ ಹಾಗೂ ಬಲಿಷ್ಠ ಅರ್ಜೆಂಟೀನಾ ಕಾದಾಟ ನಡೆಸಲಿದೆ. ಬಲಾಬಲ, ಅದೃಷ್ಠ ಹೇಗಿದೆ? ಚಾಂಪಿಯನ್ ಪಟ್ಟಕ್ಕೆ ಮುತ್ತಿಕ್ಕುವವರು ಯಾರು? 

Share this Video
  • FB
  • Linkdin
  • Whatsapp

ಫಿಫಾ ವಿಶ್ವಕಪ್ ಫುಟ್ಬಾಲ್ ಟೂರ್ನಿ ಅಂತಿಮ ಘಟ್ಟ ತಲುಪಿದೆ. ಚಾಂಪಿಯನ್ ಪಟ್ಟಕ್ಕಾಗಿ ಫ್ರಾನ್ಸ್ ಹಾಗೂ ಅರ್ಜೆಂಟೀನಾ ತಂಡ ಸೆಣಸಾಟ ನಡೆಸಲಿದೆ. ಉಭಯ ತಂಡಗಳು ಮೂರನೇ ಬಾರಿ ಟ್ರೋಫಿಗೆ ಮುತ್ತಿಕ್ಕಲು ಪೈಪೋಟಿ ನಡೆಸುತ್ತಿದೆ. ಮತ್ತೊಂದೆಡೆ ಹಲವು ತಾರಾ ಆಟಗಾರರು ಗಾಯಗೊಂಡು ತಂಡದಿಂದ ಹೊರಬಿದ್ದರೂ ಫ್ರಾನ್ಸ್‌ ಬಲಿಷ್ಠ ತಂಡವನ್ನು ಕಣಕ್ಕಿಳಿಸುವಲ್ಲಿ ಯಶಸ್ವಿಯಾಗಿರುವುದು ತಂಡದ ಬೆಂಚ್‌ ಬಲ ಎಷ್ಟಿದೆ ಎನ್ನುವುದಕ್ಕೆ ಸಾಕ್ಷಿ. ಫ್ರಾನ್ಸ್‌ ಕೇವಲ ಆಕ್ರಮಣಕಾರಿ ಆಟ ಮಾತ್ರವಲ್ಲ, ಅಷ್ಟೇ ಬಲಿಷ್ಠ ರಕ್ಷಣಾತ್ಮಕ ಆಟವನ್ನು ಆಡಬಲ್ಲದು ಎನ್ನುವುದು ಮೊರಾಕ್ಕೊ ವಿರುದ್ಧ ಸೆಮೀಸ್‌ನಲ್ಲಿ ಸಾಬೀತಾಯಿತು. ಎರಡು ಶ್ರೇಷ್ಠ ತಂಡಗಳ ನಡುವಿನ ರೋಚಕ ಹಣಾಹಣಿಗೆ ಪಂದ್ಯ ಸಾಕ್ಷಿಯಾಗುವುದರಲ್ಲಿ ಅನುಮಾನವಿಲ್ಲ. ಈ ಹೋರಾಟದಲ್ಲಿ ಚಾಂಪಿಯನ್ ಕಿರೀಟ ಅಲಂಕರಿಸುವ ತಂಡ ಯಾವುದು? ಯಾರ ಪಾಲಾಗಲಿದೆ ಗೋಲ್ಡನ್ ಬೂಟ್? ಇಲ್ಲಿದೆ ಉತ್ತರ.

Related Video