ಯುರೋ ಕಪ್‌ ಫೈನಲ್‌: ಇಂಗ್ಲೆಂಡ್-ಇಟಲಿ ಅಭಿಮಾನಿಗಳ ನಡುವೆ ಗುದ್ದಾಟ

ಫೈನಲ್‌ ಪಂದ್ಯ ಮುಕ್ತಾಯವಾಗುತ್ತಿದ್ದಂತೆ ವೆಂಬ್ಲೈ ಮೈದಾನದಲ್ಲಿ ಇಟಲಿ ಆಟಗಾರರು ಸಂಭ್ರಮಾಚರಣೆ ಮಾಡುತ್ತಿದ್ದರೆ, ಮೈದಾನದ ಹೊರಗಡೆ ಅಭಿಮಾನಿಗಳ ನಡುವೆ ವಾಕ್ಸಮರ ಮುಂದುವರೆದು ಕೈ-ಕೈ ಮಿಲಾಯಿಸಿದ್ದಾರೆ.

Share this Video
  • FB
  • Linkdin
  • Whatsapp

ಲಂಡನ್‌(ಜು.12): ಇಂಗ್ಲೆಂಡ್ ಈ ಬಾರಿ ಯುರೋ ಕಪ್ ಫುಟ್ಬಾಲ್‌ ಟ್ರೋಫಿ ಗೆಲ್ಲಲಿದೆ ಎಂದು ಆಸೆಗಣ್ಣಿನಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ಇಟಲಿ ಶಾಕ್‌ ಕೊಟ್ಟಿದೆ. ಪೆನಾಲ್ಟಿ ಶೂಟೌಟ್‌ನಲ್ಲಿ ಭರ್ಜರಿ ಗೆಲುವು ಸಾಧಿಸುವ ಮೂಲಕ ಇಟಲಿ ತಂಡವು ಎರಡನೇ ಬಾರಿಗೆ ಯುರೋ ಕಪ್‌ ಎತ್ತಿಹಿಡಿದಿದೆ.

ಫೈನಲ್‌ ಪಂದ್ಯ ಮುಕ್ತಾಯವಾಗುತ್ತಿದ್ದಂತೆ ವೆಂಬ್ಲೈ ಮೈದಾನದಲ್ಲಿ ಇಟಲಿ ಆಟಗಾರರು ಸಂಭ್ರಮಾಚರಣೆ ಮಾಡುತ್ತಿದ್ದರೆ, ಮೈದಾನದ ಹೊರಗಡೆ ಅಭಿಮಾನಿಗಳ ನಡುವೆ ವಾಕ್ಸಮರ ಮುಂದುವರೆದು ಕೈ-ಕೈ ಮಿಲಾಯಿಸಿದ್ದಾರೆ.

Scroll to load tweet…

ಇಂಗ್ಲೆಂಡ್ ಮಣಿಸಿ ಯುರೋ ಕಪ್ ಚಾಂಪಿಯನ್ ಪಟ್ಟ ಅಲಂಕರಿಸಿದ ಇಟಲಿ

ಇಟಲಿ ವಿರುದ್ದದ ಸೋಲನ್ನು ಅರಗಿಸಿಕೊಳ್ಳದ ಇಂಗ್ಲೆಂಡ್ ಅಭಿಮಾನಿಗಳು, ಪಂದ್ಯ ಮುಗಿಯುತ್ತಿದ್ದಂತೆಯೇ ಇಟಲಿ ಅಭಿಮಾನಿಗಳ ಮೇಲೆ ಮುಗಿ ಬಿದ್ದಿದ್ದಾರೆ. ಇಟಲಿ ಅಭಿಮಾನಿಗಳನ್ನು ಜನಾಂಗೀಯವಾಗಿ ನಿಂಧಿಸಿದ್ದಲ್ಲದೇ, ಇಟಲಿ ರಾಷ್ಟ್ರಧ್ವಜವನ್ನು ಹರಿದುಹಾಕಿ ಇಂಗ್ಲೆಂಡಿಗರು ಅಟ್ಟಹಾಸ ಮೆರೆದಿದ್ದಾರೆ.

Related Video