ಹೋಟೆಲ್‌ ಖಾದ್ಯ ಪ್ರಿಯರಿಗೆ ಶಾಕ್‌, ಶೇ.10ರಷ್ಟು ದರ ಏರಿಕೆಯ ಬರೆ!

ಹೋಟೆಲ್ ಫುಡ್ ತಿನ್ನೋರಿಗೆ ಶೀಘ್ರದಲ್ಲಿ ದರ ಏರಿಕೆಯ ಬರೆ ಬೀಳಲಿದೆ. ತಿಂಡಿ, ಊಟದ ಬೆಲೆ ಹೆಚ್ಚಳಕ್ಕೆ ಹೋಟೆಲ್ ಮಾಲೀಕರು ತೀರ್ಮಾನ ಮಾಡಿದ್ದು,  ಇಂದು ಹೋಟೆಲ್ ಮಾಲೀಕರ ಸಂಘದಿಂದ ಮಹತ್ವದ ಸಭೆ ನಡೆಯಲಿದೆ.

First Published Apr 3, 2023, 3:49 PM IST | Last Updated Apr 3, 2023, 3:49 PM IST

ಬೆಂಗಳೂರು (ಮಾ.3): ಹೋಟೆಲ್ ಫುಡ್ ತಿನ್ನೋರಿಗೆ ಶೀಘ್ರದಲ್ಲಿ ದರ ಏರಿಕೆಯ ಬರೆ ಬೀಳಲಿದೆ. ತಿಂಡಿ, ಊಟದ ಬೆಲೆ ಹೆಚ್ಚಳಕ್ಕೆ ಹೋಟೆಲ್ ಮಾಲೀಕರು ತೀರ್ಮಾನ ಮಾಡಿದ್ದು,  ಇಂದು ಹೋಟೆಲ್ ಮಾಲೀಕರ ಸಂಘದಿಂದ ಮಹತ್ವದ ಸಭೆ ನಡೆಯಲಿದೆ. ಅಡುಗೆ ಸಾಮಗ್ರಿ, ಎಲ್‌ಪಿಜಿ ದರ ಹೆಚ್ಚಳ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಬೆಲೆ ಏರಿಕೆ ಕಾರಣದಿಂದ ಮತ್ತೊಮ್ಮೆ ಕಾಫಿ-ತಿಂಡಿ ಬೆಲೆ ಶೇ.10ರಷ್ಟು ಏರಿಕೆ ಸಾಧ್ಯತೆ ಇದೆ.  ಹೋಟೆಲ್‌ ಮಾಲೀಕರು ಕಾಫಿ-ತಿಂಡಿ ಬೆಲೆ ಏರಿಕೆಗೆ ಬಹುತೇಕ ಸಮ್ಮತ ಸೂಚಿಸಿದ್ದಾರೆ. ವಾಣಿಜ್ಯ ಬಳಕೆಯ ಅಡುಗೆ ಅನಿಲ, ಹಾಲು, ತುಪ್ಪ, ಬೆಣ್ಣೆ ಹಾಗೂ ಇತರೆ ಆಹಾರ ಪದಾರ್ಥಗಳ ಬೆಲೆ ಹೆಚ್ಚಳವಾಗಿದೆ. ಹೀಗಾಗಿ ತಿಂಡಿಗಳ ಬೆಲೆ ಹೆಚ್ಚಳ ಅನಿವಾರ್ಯ ಎಂಬ ತೀರ್ಮಾನಕ್ಕೆ ಹೋಟೆಲ್‌ ಮಾಲೀಕರು ನಿರ್ಧಾರ ಮಾಡಿದ್ದಾರೆ. ಆದ್ದರಿಂದ ಹೋಟೆಲ್‌ ಆಹಾರಗಳ ಬೆಲೆ ಏರಿಕೆ ಜನರ ಜೇಬಿಗೆ ಕತ್ತರಿ ಬೀಳಲಿದೆ. ವಾಣಿಜ್ಯ ಬಳಕೆಯ ಸಿಲಿಂಡರ್‌ಗಳಿಗೆ ಬಳಕೆ ಆಧಾರದ ಮೇಲೆ ಪ್ರತಿ ಸಿಲಿಂಡರ್‌ಗೆ ಕನಿಷ್ಠ 150 ರೂ. ನಿಂದ ಗರಿಷ್ಠ 250 ರೂ.ವರೆಗೆ ವಿನಾಯಿತಿ ನೀಡಲಾಗಿದೆ. ಕಳೆದ 6-7 ತಿಂಗಳಿನಿಂದ ಈ ವಿನಾಯಿತಿ ಹೋಟೆಲ್ ಉದ್ಯಮಕ್ಕೆ  ಸಿಗುತ್ತಿಲ್ಲ.