Mahakal Lok Ujjain: ಹೆಜ್ಜೆಹೆಜ್ಜೆಯಲ್ಲೂ ಮೂಡುತ್ತೆ ಶಿವಭಕ್ತಿ: ಹೇಗಿತ್ತು 5 ವರ್ಷದ ತಯಾರಿ?

ಆಗ 3 ಹೆಕ್ಟೇರ್ ಭೂಮಿ, ಈಗ 47 ಹೆಕ್ಟೇರ್ ಶಿವಲೋಕ!
856 ಕೋಟಿ ವೆಚ್ಚದ ಕಾಲನಿಲಯ!
108 ಸ್ತಂಭಗಳು! 190 ಶಿಲ್ಪಗಳು! ಶಿವಪುರಾಣದ ಕತೆಗಳು!
ಇದೇನಾ ಭೂಕೈಲಾಸ!?

First Published Oct 12, 2022, 2:16 PM IST | Last Updated Oct 12, 2022, 2:16 PM IST

ಆಗ 3 ಹೆಕ್ಟೇರ್ ಕೂಡ ಇಲ್ಲ ದೈವ ಭೂಮಿ. ಈಗ 47 ಹೆಕ್ಟೇರ್ ಶಿವಲೋಕವಾಗಿ ಬದಲಾಗಿದೆ. ಹತ್ತಲ್ಲ, ನೂರಲ್ಲ, ಬರೋಬ್ಬರಿ 856 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾದ ಮಹಾಕಾಲನ ನಿಲಯ, ಹೇಗಿದೆ ಗೊತ್ತಾ? 108 ಸ್ತಂಭಗಳು..  190 ಶಿಲ್ಪಗಳು.. ಎಲ್ಲಿ ಕಣ್ಣು ಹಾಯಿಸಿದ್ರೂ, ಅಲ್ಲೆಲ್ಲಾ ಶಿವಪುರಾಣದ ಕತೆಗಳು.. ಅವನ್ನೆಲ್ಲಾ ನೋಡ್ತಿದ್ರೆ ಮೂಡೋ ಅನುಮಾನ ಒಂದೇ, ಇದೇನಾ ಭೂಕೈಲಾಸ ಅಂತ. ಇದಕ್ಕೆಲ್ಲಾ ಕಾರಣವಾಗಿದ್ದು ಉಜ್ಜಯಿನಿ ಮಹಾಕಾಲ್ ಕಾರಿಡಾರ್. ಇದು ಜಗತ್ತನ್ನೇ ನಿಬ್ಬೆರಗಾಗಿಸಿದ್ದೇಕೆ ಗೊತ್ತಾ.? ಹೆಜ್ಜೆಹೆಜ್ಜೆಯಲ್ಲೂ  ಶಿವಭಕ್ತಿ ಮೂಡಿಸೋ ಮಹಾದ್ಭುತಕ್ಕೆ ಹೇಗಿತ್ತು ಗೊತ್ತಾ 5 ವರ್ಷದ ತಯಾರಿ? 

Temples renovation: ಮೋದಿ ನೇತೃತ್ವದಲ್ಲಿ ಗತವೈಭವ ಮರಳಿ ಪಡೆಯುತ್ತಿವೆ ದೇವಾಲಯಗಳು!

ಮಹಾಕಾಲನ ಸನ್ನಿಧಾನಕ್ಕೆ ಈಗ ಎಲ್ಲಿಲ್ಲದ ಮೆರಗು ಬಂದಿದೆ. ಜಗತ್ತಿನ ಪುರಾತನ ನಗರವೊಂದಕ್ಕೆ ಗತವೈಭವ ಮರುಕಳಿಸಿದೆ. ಅದರ ಅಭೂತಪೂರ್ವ ಸೌಂದರ್ಯ ಎಂಥದ್ದು ಅನ್ನೋದರ ಪೂರ್ತಿ ವಿವರ, ಇಲ್ಲಿದೆ ನೋಡಿ..