ಬ್ರಹ್ಮ ಭೂಮಿ, ಮನುಷ್ಯ, ಪ್ರಾಣಿ ಸಂಕುಲವನ್ನು ಸೃಷ್ಟಿಸಿದ್ದು ಹೇಗೆ? ಭಾಗವತ ಏನು ಹೇಳುತ್ತದೆ?
ಹರಿಯ ಅನುಮತಿ ಪಡೆದ ಬ್ರಹ್ಮ ತನ್ನ ದೇಹವನ್ನು 2 ಭಾಗವನ್ನಾಗಿ ಮಾಡುತ್ತಾನೆ. ಒಂದು ಭಾಗ ಪುರುಷ ರೂಪ ತಾಳಿದರೆ, ಇನ್ನೊಂದು ಭಾಗ ಸ್ತ್ರೀ ರೂಪ ತಾಳುತ್ತದೆ. ಈ ರೂಪರಿಂದ ಸ್ವಯಂಭವ ಮನು ಮತ್ತು ಶತರೂಪ ದೇವಿ ಎಂಬ ಪುರುಷ, ಸ್ತ್ರೀ ಹುಟ್ಟುತ್ತಾರೆ.
ಹರಿಯ ಅನುಮತಿ ಪಡೆದ ಬ್ರಹ್ಮ ತನ್ನ ದೇಹವನ್ನು 2 ಭಾಗವನ್ನಾಗಿ ಮಾಡುತ್ತಾನೆ. ಒಂದು ಭಾಗ ಪುರುಷ ರೂಪ ತಾಳಿದರೆ, ಇನ್ನೊಂದು ಭಾಗ ಸ್ತ್ರೀ ರೂಪ ತಾಳುತ್ತದೆ. ಈ ರೂಪರಿಂದ ಸ್ವಯಂಭವ ಮನು ಮತ್ತು ಶತರೂಪ ದೇವಿ ಎಂಬ ಪುರುಷ, ಸ್ತ್ರೀ ಹುಟ್ಟುತ್ತಾರೆ.
ಬ್ರಹ್ಮ ಇವರಿಬ್ಬರಿಗೂ ಮದುವೆ ಮಾಡಿ, ಮಾನವ ಸೃಷ್ಟಿಯನ್ನು ನೀವು ಮುಂದುವರೆಸಿ ಎಂದು ಆಜ್ಞೆ ಮಾಡುತ್ತಾನೆ. ಮನು ಹಾಗೂ ಶತರೂಪ ದಂಪತಿಗಳು ಇದಕ್ಕೆ ಒಪ್ಪುತ್ತಾರೆ. ಇದಕ್ಕೆ ಅವಶ್ಯಕವಾದ ಭೂಮಿ ಇಲ್ಲಿಲ್ವಲ್ಲ, ಅದು ಘನೋದಕ ಸಮುದ್ರದಲ್ಲಿ ಮುಳುಗಿ ಹೋಗಿದೆಯಲ್ಲ, ಏನು ಮಾಡುವುದು? ಎಂದು ಬ್ರಹ್ಮನಲ್ಲಿ ಪ್ರಾರ್ಥಿಸುತ್ತಾರೆ. ಮುಂದೇನಾಗುತ್ತದೆ? ಕೇಳೋಣ ಬನ್ನಿ..!