ಮೂಲಾಧಾರ ರಹಸ್ಯ: ಗಣೇಶನಿಗೂ, ಸಂಖ್ಯೆ 21ಕ್ಕೂ ಇರುವ ನಂಟೇನು?
ಗಣೇಶನಿಗೆ ಸಾಮಾನ್ಯವಾಗಿ 21 ನಮಸ್ಕಾರ, 21 ಬಗೆಯ ಭಕ್ಷ್ಯಗಳು, ಒಂದೊಂದು ಬಗೆಯ ಭಕ್ಷ್ಯವೂ 21 ಸಂಖ್ಯೆಯಲ್ಲಿ ಇಡುವ ಪದ್ಧತಿ ಇದೆ. ಗಣೇಶನಿಗೂ ಸಂಖ್ಯೆ 21ಕ್ಕೂ ಇರುವ ನಂಟೇನು?
'ಬೆನಕ ಬೆನಕ, ಏಕದಂತ, ಪಚ್ಚೆ ಕಲ್ಲು, ಪಾಣಿ ಪೀಠ, ಮುತ್ತಿನುಂಡೆ, ಹೊನ್ನ ಗಂಟೆ, ಇಂತಿ ಒಪ್ಪುವ ಶ್ರೀ ಸಿದ್ಧಿವಿನಾಯಕನಿಗೆ 21 ನಮಸ್ಕಾರಗಳು'- ಪ್ರತಿ ದಿನ ದೇವರಿಗೆ ನಮಸ್ಕರಿಸುವಾಗ ಹಲವರು ಹೇಳುವ ಮಂತ್ರವಿದು. ಚಿಕ್ಕ ಮಕ್ಕಳಿಗಂತೂ ಮೊದಲಿಗೆ ಕಲಿಸುವ ಶ್ಲೋಕವೇ ಇದು. ಇಲ್ಲಿ 21 ಬಾರಿಯೇ ನಮಸ್ಕಾರ ಎನ್ನುವುದೇಕೆ? ಗಣೇಶ ಚತುರ್ಥಿಯಂದು ಚಂದ್ರನನ್ನು ನೋಡಿದರೆ 21 ಬಾರಿ ನಮಸ್ಕಾರ ಮಾಡಬೇಕೆನ್ನುವ ಮಾತಿದೆ. ಇನ್ನು ಗಣೇಶನಿಗೆ ಅರ್ಪಿಸುವ ಗೆಜ್ಜೆವಸ್ತ್ರದಲ್ಲೂ 21 ಎಳೆ ಇರುತ್ತದೆ.
Shukra Gochar 2022: ಸಮಸ್ಯೆಗಳ ಸುಳಿಗೆ ಸಿಲುಕುವ ನಾಲ್ಕು ರಾಶಿಗಳು!
ಆತನಿಗೆ ಹಚ್ಚುವ ದೀಪಕ್ಕೂ 21 ಎಳೆಯ ಬತ್ತಿ ಹಾಕುವವರಿದ್ದಾರೆ. 21 ಗರಿಕೆ ಒಪ್ಪಿಸಲಾಗುತ್ತದೆ. ಗಣೇಶನಿಗೆ 21 ಬಗೆಯ ಭಕ್ಷ್ಯ ಭೋಜನ ಮಾಡಿದರೆ ಒಳ್ಳೆಯದು ಎಂದು ಜನ ನಂಬುತ್ತಾರೆ. ಅಷ್ಟೇ ಏಕೆ, ಮಾಡಿದ್ದೆಲ್ಲ ಪದಾರ್ಥವೂ 21ರ ಸಂಖ್ಯೆಯಲ್ಲಿಟ್ಟು ನೈವೇದ್ಯ ಮಾಡುತ್ತಾರೆ. ಇಷ್ಟಕ್ಕೂ ಸಂಖ್ಯೆ 21ಕ್ಕೂ ಗಣಪತಿಗೂ ಇರುವ ನಂಟೇನು? ಬನ್ನಿ ತಿಳಿಯೋಣ..