ನಾಗರ ಪಂಚಮಿಯ ಮಹತ್ವವೇನು? ಆಚರಣೆ ಹೇಗೆ ಮಾಡಬೇಕು..?

ನಾಗರನ ತಾಯಿ ಕದೃ ನಾಗರನಿಗೆ ಜನ್ಮ ನೀಡಿದ ದಿನವೇ ನಾಗರ ಪಂಚಮಿ ಎಂದು ಆಧ್ಯಾತ್ಮಿಕ ಚಿಂತಕ ಡಾ. ಹರೀಶ್ ಕಶ್ಯಪ್ ತಿಳಿಸಿದರು. ಅವರು ನಾಗರ ಪಂಚಮಿಯ ಆಚರಣೆ ಕುರಿತು ಮಾಹಿತಿ ನೀಡಿದ್ದಾರೆ.

First Published Aug 20, 2023, 10:50 AM IST | Last Updated Aug 20, 2023, 10:50 AM IST

ನಾಗರ ಪಂಚಮಿ ಹಬ್ಬವನ್ನು ಪ್ರತಿ ವರ್ಷ ಶ್ರಾವಣ ಮಾಸದ ಶುಕ್ಲ ಪಕ್ಷದ ಐದನೇ ದಿನದಂದು ಆಚರಿಸಲಾಗುತ್ತದೆ ಎಂದು ಡಾ. ಹರೀಶ್ ಕಶ್ಯಪ್ ಹೇಳಿದರು. ಈ ದಿನ ನಾಗದೇವತೆಯನ್ನು ಪೂಜಿಸಲಾಗುತ್ತದೆ. ನಾಗ ಸನ್ನಿಧಾನಕ್ಕೆ ಭೇಟಿ ನೀಡಿ ಅಲ್ಲಿ ನಾಗಗಳನ್ನು ಆರಾಧಿಸುತ್ತಾರೆ. ನಾಗದೇವತೆಗಳು ಎಲ್ಲೆಲ್ಲಿಯೂ ಇದ್ದಾರೆ ಎಂದು ಅವರು ತಿಳಿಸಿದ್ದಾರೆ. ಈ ಕುರಿತು ಅವರು ಸಂಪೂರ್ಣ ಮಾಹಿತಿ ನೀಡಿದ್ದಾರೆ.