Asianet Suvarna News Asianet Suvarna News

ಗುರುಪೂರ್ಣಿಮೆಯ ವಿಶೇಷತೆಯೇನು? ಬ್ರಹ್ಮಾಂಡ ಗುರೂಜಿ ಹೇಳ್ತಾರೆ ಕೇಳಿ..

ಆಷಾಢ ಮಾಸದ ಹುಣ್ಣಿಮೆಯ ದಿನ ಗುರು ಪೌರ್ಣಮಿ ಅಥವಾ ವ್ಯಾಸ ಪೌರ್ಣಮಿ. ಈ ದಿನ ಈ ಲೋಕ ಕಂಡ ಮಹಾನ್ ಗುರುಗಳಾದ ವ್ಯಾಸ ಮಹರ್ಷಿಗಳ ಜನ್ಮದಿನ. ಈ ದಿನ ವಿಶೇಷತೆಯ ಬಗ್ಗೆ ಬ್ರಹ್ಮಾಂಡ ಗುರೂಜಿಗಳಾದ ನರೇಂದ್ರ ಬಾಬು ಶರ್ಮಾ ತಿಳಿಸಿಕೊಡಲಿದ್ದಾರೆ. 

First Published Jul 11, 2022, 11:01 AM IST | Last Updated Jul 11, 2022, 11:01 AM IST

ಗುರಿ ಮುಂದೆ ಗುರು ಹಿಂದೆ ಇದ್ದರೆ ಯಶಸ್ಸು ಖಂಡಿತಾ ಲಭಿಸುತ್ತದೆ ಎಂಬ ಮಾತಿದೆ. ಗುರುವನ್ನು ನಾವು ದೇವರ ಸ್ಥಾನದಲ್ಲಿಟ್ಟು ನೋಡುತ್ತೇವೆ. ಜೀವನ ಪಾಠಗಳನ್ನು ಹೇಳಿಕೊಡುವವರೇ ಗುರು. ಇಂಥ ಗುರುವಿಗೆ ನಮ್ಮ ಗೌರವ, ಕೃತಜ್ಞತೆ ಸಲ್ಲಿಸುವ ದಿನವೇ ಗುರು ಪೌರ್ಣಿಮೆ(Guru Purnima). ಆಷಾಢ ಮಾಸದ ಹುಣ್ಣಿಮೆಯಂದು ಗುರು ಪೂರ್ಣಿಮಾ ಆಚರಿಸಲಾಗುತ್ತದೆ. 

ಶುಕ್ರ ಶನಿ ಗೋಚಾರ 2022: ಈ ಐದು ರಾಶಿಗಳಿಗೆ ಹಿಗ್ಗಿನ ಸುಗ್ಗಿ

ಈ ಗುರು ಪೂರ್ಣಿಮೆಯನ್ನು ಮಹಾಭಾರತದ ಕರ್ತೃ ವ್ಯಾಸ ಮಹರ್ಷಿಗಳ ಜನ್ಮ ದಿನದ ಕಾರಣಕ್ಕಾಗಿ ಈ ದಿನ ಆಚರಿಸಲಾಗುತ್ತದೆ. ಆದ್ದರಿಂದಲೇ ಇದನ್ನು ವ್ಯಾಸ ಪೂರ್ಣಿಮಾ ಎಂದೂ ಕರೆಯಲಾಗುತ್ತದೆ. ಈ ದಿನದ ವಿಶೇಷತೆಗಳೇನು? ವ್ಯಾಸ ಮಹರ್ಷಿಗಳ ಕೊಡುಗೆಯೇನು? ಗುರು ಪೂರ್ಣಿಮಾದಂದು ಏನು ಮಾಡಬೇಕು? ಎಲ್ಲವನ್ನೂ ಬ್ರಹ್ಮಾಂಡ ಗುರುಗಳಾದ ನರೇಂದ್ರ ಬಾಬು ಶರ್ಮಾ ತಿಳಿಸಿಕೊಟ್ಟಿದ್ದಾರೆ. 

Video Top Stories